alex Certify ನಗು ತರಿಸುತ್ತೆ ಸ್ಕೂಟರ್‌ ಕದಿಯುವಾಗ ಈ ಕಳ್ಳರು ಮಾಡಿಕೊಂಡ ಅವಾಂತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುತ್ತೆ ಸ್ಕೂಟರ್‌ ಕದಿಯುವಾಗ ಈ ಕಳ್ಳರು ಮಾಡಿಕೊಂಡ ಅವಾಂತರ

ಶಂಕಿತ ಕಳ್ಳರಿಬ್ಬರ ವಿಚಿತ್ರ ವರ್ತನೆ ಕಂಡು ಸಾರ್ವಜನಿಕರು ದಂಗಾಗಿರುವಂತಹ ಘಟನೆ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನ ರಸ್ತೆಯಲ್ಲಿ ನಡೆದಿದೆ.

ಶಂಕಿತ ಕಳ್ಳರಿಬ್ಬರು ಸ್ಕೂಟರ್ ಗಾಗಿ ಜಗಳವಾಡುತ್ತಿರುವ ದೃಶ್ಯದೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ವಾಕಿಂಗ್ ಗೆ ಬಂದಿದ್ದ ವ್ಯಕ್ತಿಯೊಬ್ಬರು ಶಂಕಿತ ಕಳ್ಳರ ವಿಚಿತ್ರ ವರ್ತನೆಯ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.

ವ್ಯಕ್ತಿಯು ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದುದನ್ನು ಕಂಡ ಶಂಕಿತ ಕಳ್ಳರು ಸ್ಕೂಟರ್ ನಲ್ಲಿ ಕುಳಿತು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಈ ವೇಳೆ ರಸ್ತೆ ಮಧ್ಯದಲ್ಲಿ ಸ್ಕೂಟರ್ ಪಲ್ಟಿಯಾಗಿ ಬಿದ್ದಿದ್ದಾರೆ.

ಗಾಯಗೊಂಡರೂ ಕೂಡ ಒಬ್ಬಾತ ಕುಂಟುತ್ತಾ ಬಂದು ಸ್ಕೂಟರ್ ಏರಿ ಪರಾರಿಯಾದ್ರೆ, ಮತ್ತೊಬ್ಬನ ಹೆಬ್ಬೆರಳಿಗೆ ತೀವ್ರ ಗಾಯವಾಗಿದ್ದರಿಂದ ಚಡಪಡಿಸಿದ್ದಾನೆ. ಆಂಬುಲೆನ್ಸ್ ಗೆ ಕರೆ ಮಾಡಿ ಎಂದು ಅಲ್ಲಿದ್ದ ಜನರನ್ನು ಮನವಿ ಮಾಡಿದ್ದಾನೆ.

ಈ ವೇಳೆ, ಪೊಲೀಸರಿಗೆ ಕರೆ ಮಾಡಿ, ಆತ ದರೋಡೆಕೋರ…..ತನ್ನ ಬೈಕ್ ಕದ್ದಿದ್ದಾನೆ ಎಂದು ಪಕ್ಕದಲ್ಲಿದ್ದ ವ್ಯಕ್ತಿ ಹೇಳುತ್ತಿರುವುದು ಕೇಳುತ್ತದೆ. ಇನ್ನು ಅಪಘಾತದಿಂದ ಗಾಯಗೊಂಡ ನಂತರ ಹಿಂದೆ ಬಿದ್ದಿದ್ದ ವ್ಯಕ್ತಿ, ಪೊಲೀಸರು ಬರುವ ಮೊದಲೇ ಅಲ್ಲಿಂದ ಕಾಲ್ಕಿತ್ತಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...