ಬೇಸಿಗೆಯ ರಜೆಯ ಬಳಿಕ ಶಾಲೆಗೆ ಮರಳಲು ಹರ್ಷದಿಂದ ಸಿದ್ಧರಾದ ಮಕ್ಕಳಿಗೆ ಶಾಕಿಂಗ್ ನ್ಯೂಸ್. ಅವರು ಓದುತ್ತಿದ್ದ ಶಾಲೆಯೇ ನಾಪತ್ತೆಯಾಗಿತ್ತು. ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಲಕ್ನೋದಲ್ಲಿ.
ಸುಮಾರು 140 ವರ್ಷಗಳಷ್ಟು ಹಳೆಯದಾದ ಶಾಲೆಯೊಂದು ರಾತ್ರೋರಾತ್ರಿ ಕಾಣೆಯಾಗಿರುವ ಕುತೂಹಲಕಾರಿ ಪ್ರಕರಣ ವರದಿಯಾಗಿದೆ. ಲಕ್ನೋದ ಗೋಲಗಂಜ್ ಪ್ರದೇಶದ ಶತಮಾನೋತ್ಸವ ಹೈಯರ್ ಸೆಕೆಂಡರಿ ಶಾಲೆ ಮತ್ತು ಕಾಲೇಜಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಜೆ ಮುಗಿಸಿ ಹಿಂದಿರುಗಿದಾಗ ಅವರಿಗೆ ಈ ಆಘಾತ ಕಾದಿತ್ತು.
ಐತಿಹಾಸಿಕ ಶಾಲೆ ಕಳೆದುಹೋಗಿತ್ತಲ್ಲದೇ ಆ ಸ್ಥಳದಲ್ಲಿ ಹೊಸ ಖಾಸಗಿ ಶಾಲೆ ತಲೆ ಎತ್ತಿತ್ತು. ಅಷ್ಟೇ ಅಲ್ಲ, ಶಾಲೆಯ ಹೋರ್ಡಿಂಗ್ಸ್ ಮತ್ತು ನಾಮಫಲಕ ಬದಲಾಯಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕ್ಯಾಂಪಸ್ಗೆ ಪ್ರವೇಶ ಕೂಡ ನಿರಾಕರಿಸಲಾಯಿತು.
ನಂತರ ಸುಮಾರು 360 ವಿದ್ಯಾರ್ಥಿಗಳು ಗೇಟ್ನ ಹೊರಗೆ ಕುಳಿತರು ರಸ್ತೆಯಲ್ಲೇ ತರಗತಿ ತೆಗೆದುಕೊಳ್ಳುವಂತೆ ಶಿಕ್ಷಕರನ್ನು ಒತ್ತಾಯಿಸಿದರು.
ಈ ಕುರಿತು ಪ್ರಾಂಶುಪಾಲ ರಾಜೀವ್ ಡೇವಿಡ್ ದಯಾಳ್, ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಶಾಲಾ ನಿರೀಕ್ಷಕರಿಗೆ ದೂರು ಸಲ್ಲಿಸಿದ್ದು, ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.
ಇಲ್ಲಿದೆ ಪಿಯು ತರಗತಿಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿಗೊಂದು ಮುಖ್ಯ ಮಾಹಿತಿ
ಈ ಶಾಲೆಯಲ್ಲಿ ಸುಮಾರು 10 ಖಾಯಂ ಶಿಕ್ಷಕರು ಮತ್ತು 6 ರಿಂದ 12 ನೇ ತರಗತಿಯ 360 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ನಾವು ಶಾಲೆಗೆ ತಲುಪಿದಾಗ, ಹೆಸರನ್ನು ಬದಲಾಯಿಸಲಾಗಿತ್ತು ಮತ್ತು ನಮಗೆ ಪ್ರವೇಶ ನಿರಾಕರಿಸಲಾಯಿತು. ಪೀಠೋಪಕರಣಗಳನ್ನು ಹೊರಕ್ಕೆ ಸರಿಸಲಾಗಿದೆ. ಈ ಶಾಲೆಯನ್ನು ಆಟದ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ನಮಗೆ ತಿಳಿಸಲಾಯಿತು. ಕೂಡಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದು, ಅವರು ಈ ಬಗ್ಗೆ ಗಮನಹರಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದರು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೂರ್ಯಪಾಲ್ ಗಂಗ್ವಾರ್ ಶುಕ್ರವಾರ ಮಾತನಾಡಿ, ಶತಮಾನೋತ್ಸವ ಕಂಡ ಹೈಯರ್ ಸೆಕೆಂಡರಿ ಶಾಲೆ ಮತ್ತು ಕಾಲೇಜಿನಲ್ಲಿ ಮೊದಲಿನಂತೆ ತರಗತಿಗಳು ನಡೆಯಲಿವೆ. ಹೊರಗೆ ಪೊಲೀಸ್ ಪಡೆಯನ್ನು ನಿಯೋಜಿಸಲಾಗುವುದು. ಅಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ನಮ್ಮ ಶಾಲೆಯ ಮೇಲಿನ ವೈಷಮ್ಯದಿಂದ ಖಾಸಗಿ ಶಾಲೆ ತೆರೆಯಲಾಗಿದೆ ಎಂದು ಪ್ರಾಂಶುಪಾಲ ದಯಾಳ್ ನೀಡಿದ ದೂರಿನ ಮೇರೆಗೆ ಬಿಎಸ್ಎ ಹಾಗೂ ಇತರ ಅಧಿಕಾರಿಗಳೊಂದಿಗೆ ಶಾಲೆ ಪರಿಶೀಲನೆ ನಡೆಸಿದ್ದರು.