alex Certify ಕೋರ್ಟ್‌ ಕಲಾಪದ ನಡುವೆ ನೂರಾರು ಜಿರಳೆಗಳನ್ನು ಬಿಟ್ಟ ಕಿಡಿಗೇಡಿಗಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋರ್ಟ್‌ ಕಲಾಪದ ನಡುವೆ ನೂರಾರು ಜಿರಳೆಗಳನ್ನು ಬಿಟ್ಟ ಕಿಡಿಗೇಡಿಗಳು….!

ನ್ಯೂಯಾರ್ಕ್: ಜಿರಳೆ ಅಂದ್ರೆ ಬಹುತೇಕರಿಗೆ ಹೇಸಿಗೆ, ಭಯ. ಆದ್ದರಿಂದ ಜಿರಳೆ ಕಂಡ್ರೆ ಮಾರು ದೂರ ಓಡುವವರೇ ಹೆಚ್ಚು. ಅಮೆರಿಕದ ನ್ಯೂಯಾರ್ಕ್‌ ನಗರದ ಕೋರ್ಟ್‌ನಲ್ಲಿ ಕಲಾಪ ನಡೆಯುತ್ತಿದ್ದಾಗಲೇ ನೂರಾರು ಜಿರಳೆಗಳನ್ನು ಅಲ್ಲಿ ಬಿಟ್ಟು ಗದ್ದಲ ಸೃಷ್ಟಿಸಿದ ಅತ್ಯಂತ ವಿಲಕ್ಷಣ ಘಟನೆ ವರದಿಯಾಗಿದೆ.

ರಾಜ್ಯ ರಾಜಧಾನಿಯಲ್ಲಿ ನಾಲ್ವರನ್ನು ಬಂಧಿಸಿದ್ದಕ್ಕೆ ಸಂಬಂಧಿಸಿ ಮಂಗಳವಾರ ಅಲ್ಬನಿ ಸಿಟಿ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಅಲ್ಲಿ ವಾಗ್ವಾದ ಏರ್ಪಟ್ಟಿತ್ತು. ಆಗ, ಪ್ಲಾಸ್ಟಿಕ್‌ ಕಂಟೇನರ್‌ಗಳಲ್ಲಿ ತುಂಬಿ ತಂದಿದ್ದ ಜಿರಳೆಗಳನ್ನು ಕೋರ್ಟ್‌ ಒಳಗೆ ಬಿಟ್ಟು ಗೊಂದಲದ ವಾತಾವರಣ ಸೃಷ್ಟಿಸಿದ್ದರು. ಇದೇ ವೇಳೆ ಪ್ರತಿವಾದಿ ಕೋರ್ಟ್‌ ಕಲಾಪದ ಚಿತ್ರೀಕರಣ ಆರಂಭಿಸಿದ್ದರು. ಕೂಡಲೇ ಅದಕ್ಕೆ ತಡೆಯೊಡ್ಡಲಾಯಿತು ಎಂದು ಅಸೋಸಿಯೇಟೆಡ್‌ ಪ್ರೆಸ್‌ ವರದಿ ಮಾಡಿದೆ.

BIG NEWS: PSI ನೇಮಕಾತಿ ಅಕ್ರಮ; ಫಸ್ಟ್ ರ್ಯಾಂಕ್ ಅಭ್ಯರ್ಥಿ ಕುಶಾಲ್ ಕುಮಾರ್ ಅರೆಸ್ಟ್

ಕೋರ್ಟ್‌ನಲ್ಲಿ ನಡೆದ ಸನ್ನಿವೇಶವು ಉದ್ದೇಶ ಪೂರ್ವಕವಾಗಿ ಸೃಷ್ಟಿಸಿದ್ದು ಎಂದು ಮೇಲ್ನೋಟಕ್ಕೆ ಭಾಸವಾಗುತ್ತಿದೆ. ಆದಾಗ್ಯೂ, ಯಾವುದೇ ರೀತಿಯ ತೀರ್ಮಾನಕ್ಕೆ ಅಥವಾ ಆರೋಪ ಮಾಡಲು ಬಯಸುವುದಿಲ್ಲ. ಇದೊಂದು ರೀತಿಯ ಪ್ರತಿಭಟನೆಯ ರೂಪವಾಗಿ ವ್ಯಕ್ತವಾಗಿರುವಂತೆ ಇದೆ ಎಂದು ಅಲ್ಬನಿ ಕೌಂಟಿ ಜಿಲ್ಲಾ ಅಟಾರ್ನಿ ಕಚೇರಿಯ ಡ್ಯಾರೆಲ್‌ ಕ್ಯಾಂಪ್‌ ಹೇಳಿದರು.

ಕೋರ್ಟ್‌ ಕಲಾಪದ ವೇಳೆ ಜಿರಳೆಗಳನ್ನು ಬಿಟ್ಟಕಾರಣ, ವಿಚಾರಣೆಯನ್ನು ಕೂಡಲೇ ರದ್ದುಗೊಳಿಸಲಾಗಿದೆ. ಫ್ಯುಮಿಗೇಷನ್‌ಗಾಗಿ ಕೋರ್ಟ್‌ ಅನ್ನು ಮುಚ್ಚಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸರ್ಕಾರಿ ಕೆಲಸಕ್ಕೆ ಅಡಚಣೆ ಉಂಟುಮಾಡಿದ್ದು, ಸಾಕ್ಷ್ಯ ನಾಶ ಸೇರಿ ವಾಗ್ವಾದದಲ್ಲಿ ಭಾಗಿಯಾದ 34 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...