ನೀವು ನಿಮ್ಮ ಮನೆಯ ಹೊರಗೆ ಖಾಲಿ ರಟ್ಟಿನ ಪೆಟ್ಟಿಗೆ ಏನಾದ್ರೂ ಇರಿಸಿದ್ದೀರಾ..? ಇದರಿಂದ ಏನಾದರೂ ಹಾನಿಯಾಗುತ್ತಾ..? ಬಹುಶಃ ಇಲ್ಲ ಎಂದು ಹೇಳಬಹುದು. ಇದರಲ್ಲಿ ನೀರನ್ನು ಸಂಗ್ರಹಿಸಬಹುದು, ಬೆಕ್ಕುಗಳು ಅಥವಾ ಇತರ ಸಾಕುಪ್ರಾಣಿಗಳಿಗೆ ವಿಶ್ರಾಂತಿ ಸ್ಥಳವೂ ಆಗಬಹುದು.
ಆದರೆ ಯುಕೆ ಮೂಲದ 69 ವರ್ಷದ ವೃದ್ಧೆ ರಟ್ಟಿನ ಪೆಟ್ಟಿಗೆಯನ್ನು ಮನೆಯ ಹೊರಗಡೆ ಇಟ್ಟಿದ್ದಕ್ಕಾಗಿ ಭಾರಿ ದಂಡ ತೆತ್ತಿದ್ದಾರೆ. ಪಮೇಲಾ ಹೋಮ್ಸ್ ತನ್ನ ಮನೆಯ ಹೊರಗೆ ಖಾಲಿ ರಟ್ಟಿನ ಪೆಟ್ಟಿಗೆಯನ್ನು ಬಿಟ್ಟಿದ್ದಕ್ಕಾಗಿ ಅವರ ಸ್ಥಳೀಯ ಮಂಡಳಿಯಿಂದ ಪೌಂಡ್ 400 (ರೂ. 40,000) ಪಾವತಿಸಲು ಆದೇಶಿಸಲಾಗಿದೆ.
ಕಾರ್ಡ್‌ಬೋರ್ಡ್ ಬಾಕ್ಸ್ ಅನ್ನು ಆಕೆ ತನ್ನ ಹಾಟ್ ಟಬ್‌ಗಾಗಿ ಆರ್ಡರ್ ಮಾಡಿದ ಹೊಸ ಮುಚ್ಚಳದ ಕವರ್ ಆಗಿತ್ತು. ಹೋಮ್ಸ್ ಅದನ್ನು ತನ್ನ ಮಗ ಬಂದು ತೆಗೆದುಕೊಂಡು ಹೋಗಲು ಡಾರ್ಸೆಟ್‌ನಲ್ಲಿರುವ ತನ್ನ ಮನೆಯ ಹೊರಗೆ ಮಾತ್ರ ಇಟ್ಟಿದ್ದರು. ಬಾಕ್ಸ್ ಖಾಲಿಯಾಗಿದ್ದರೂ, ರಾತ್ರಿ ಕೆಲ ಹೊತ್ತಿನಲ್ಲಿ ಅಧಿಕಾರಿಗಳಿಗೆ ತಿಳಿಸಲಾಯಿತು. ಮರುದಿನ ಬೆಳಿಗ್ಗೆ ಇದನ್ನು ವಾರ್ಡನ್ ತಪಾಸಣೆ ನಡೆಸಿದ್ದಾರೆ.
ಖಾಲಿ ಬಾಕ್ಸ್ ಅನ್ನು ತಪಾಸಣೆ ನಡೆಸಿದ ಬಳಿಕ ವೃದ್ಧೆಗೆ ಪೆನಾಲ್ಟಿ ನೋಟೀಸ್ ನೀಡಲಾಗಿದೆ. ನಾಲ್ಕು ವಾರಗಳೊಳಗೆ 400 ಪೌಂಡ್ ಪಾವತಿಸಬೇಕು. ಇಲ್ಲದಿದ್ದಲ್ಲಿ ಗರಿಷ್ಠ 50,000 ಪೌಂಡ್ ಮೊತ್ತ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದ್ಯಂತೆ.