alex Certify BIG NEWS: ಗರಿಷ್ಠ ಮಟ್ಟಕ್ಕೆ ತಲುಪಿದ ʼಬಿಟ್ ಕಾಯಿನ್ʼ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗರಿಷ್ಠ ಮಟ್ಟಕ್ಕೆ ತಲುಪಿದ ʼಬಿಟ್ ಕಾಯಿನ್ʼ ಬೆಲೆ

ಬಿಟ್ ಕಾಯಿನ್ ಬೆಲೆಯು ಬುಧವಾರ ಶೇಕಡಾ 3ಕ್ಕಿಂತ ಹೆಚ್ಚು ಏರಿಕೆಯಾಗಿ 63,901 ಡಾಲರ್ ಮಟ್ಟವನ್ನು ತಲುಪಿದೆ. ಇದಕ್ಕೆ ಯುಎಸ್, ಬಿಟ್‌ಕಾಯಿನ್ ಫ್ಯೂಚರ್ಸ್ ಆಧಾರಿತ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ ಮಂಗಳವಾರ ವಹಿವಾಟು ಆರಂಭಿಸಿರುವುದು ಕಾರಣವಾಗಿದೆ. ಇದು ಬಿಟ್ ಕಾಯಿನ್ ಬೆಲೆಯನ್ನು ಆರು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿಸಿದೆ.

ಮಂಗಳವಾರ, ಕ್ರಿಪ್ಟೋ ನಾಣ್ಯ 64,499 ಡಾಲರ್ ಮುಟ್ಟಿತು. ಮಂಗಳವಾರದ ಮೊದಲ ದಿನದ ವಹಿವಾಟಿನ ನಂತರ ಪ್ರೊಶೇರ್ಸ್ ಬಿಟ್‌ಕಾಯಿನ್ ಸ್ಟ್ರಾಟಜಿ ಇಟಿಎಫ್ ಶೇಕಡಾ 2.59 ರಷ್ಟು ಏರಿಕೆ ಕಂಡು 41.94 ಡಾಲರ್ ಗೆ ವಹಿವಾಟು ಮುಗಿಸಿತ್ತು.

ಈ ವರ್ಷದ ಜುಲೈ ಅಂತ್ಯದಲ್ಲಿ ಡಿಜಿಟಲ್ ಟೋಕನ್ ಬೆಲೆಯು ಅದರ ಕನಿಷ್ಠಕ್ಕಿಂತ ದುಪ್ಪಟ್ಟಾಗಿದೆ. ಈ ವರ್ಷ ಏಪ್ರಿಲ್‌ನಲ್ಲಿ ಸುಮಾರು 65,000 ಡಾಲರ್ ಮಟ್ಟವನ್ನು ತಲುಪಿತ್ತು. ಈ ವರ್ಷ ಇಲ್ಲಿಯವರೆಗೆ ಇದು ಶೇಕಡಾ 121 ರಷ್ಟು ಹೆಚ್ಚಳವನ್ನು ಕಂಡಿದೆ.

ಎಥೆರಿಯಮ್ ಬ್ಲಾಕ್‌ ಚೈನ್ ಗೆ ಸಂಬಂಧಿಸಿದ ನಾಣ್ಯ ಮತ್ತು ವಿಶ್ವದ ಎರಡನೇ ಅತಿದೊಡ್ಡ ಕ್ರಿಪ್ಟೋಕರೆನ್ಸಿಯಾದ ಈಥರ್‌ ಶೇಕಡಾ 2ಕ್ಕಿಂತ ಹೆಚ್ಚು ಹೆಚ್ಚಳ ಕಂಡಿದೆ. ಇದು 3,857 ಡಾಲರ್ ತಲುಪಿದೆ. ಕಾರ್ಡಾನೊ ಬೆಲೆಗಳು ಶೇಕಡಾ 2ರಷ್ಟು ಕುಸಿತ ಕಂಡು ಶೇಕಡಾ 2.10 ಕ್ಕೆ ಕುಸಿದಿವೆ. ಆದರೆ, ಡಾಗ್‌ಕಾಯಿನ್ ಶೇಕಡಾ 1 ರಷ್ಟು ಹೆಚ್ಚು ಕುಸಿದು 0.24 ಡಾಲರ್ ಗೆ ತಲುಪಿದೆ. ಇತರ ಡಿಜಿಟಲ್ ಟೋಕನ್‌ಗಳಾದ ಶಿಬಾ ಇನು, ಬಿನಾನ್ಸ್ ಕಾಯಿನ್, ಸೊಲಾನಾ, ಲಿಟ್‌ಕಾಯಿನ್, ಯೂನಿಸ್ವಾಪ್ ಕೂಡ ಕಳೆದ 24 ಗಂಟೆಗಳಲ್ಲಿ ಏರಿಕೆ ಕಂಡಿವೆ.

ಬಿಟ್ ಕಾಯಿನ್ ನ ಮೊದಲ ವಿನಿಮಯ-ವಹಿವಾಟು ವ್ಯಾಪಾರವು ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಮಂಗಳವಾರದಿಂದ ಆರಂಭವಾಗಿದೆ. ಪ್ರೊಶೇರ್ಸ್ ಬಿಟ್‌ಕಾಯಿನ್‌ಗೆ ಲಿಂಕ್ ಮಾಡಲಾದ ಸ್ಟಾಕ್ ಎಕ್ಸ್ ಚೇಂಜ್‌ನಲ್ಲಿ ವ್ಯಾಪಾರವು BITO ನ ಟಿಕ್ಕರ್ ಹೆಸರಿನೊಂದಿಗೆ ಆರಂಭವಾಗಿದೆ.

ಬಿಟ್ ಕಾಯಿನ್ ಎಂದರೆ ಏನು ?

ಬಿಟ್‌ಕಾಯಿನ್ ವಿಕೇಂದ್ರೀಕೃತ ಡಿಜಿಟಲ್ ಕರೆನ್ಸಿಯಾಗಿದೆ. ಇದನ್ನು ಜನವರಿ 2009 ರಲ್ಲಿ ರಚಿಸಲಾಗಿದೆ. ಬಿಟ್‌ಕಾಯಿನ್ ಒಂದು ರೀತಿಯ ಕ್ರಿಪ್ಟೋಕರೆನ್ಸಿ ಎಂದು ಕರೆಯಲಾಗುತ್ತದೆ. ಇದನ್ನು ಸುರಕ್ಷಿತವಾಗಿಡಲು ಕ್ರಿಪ್ಟೋಗ್ರಫಿಯನ್ನು ಬಳಸುತ್ತದೆ. ಬಿಟ್ ಕಾಯಿನನ್ನು ಯಾವುದೇ ಬ್ಯಾಂಕ್ ಅಥವಾ ಸರ್ಕಾರ ನೀಡುವುದಿಲ್ಲ. ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ ಕಾನೂನುಬದ್ಧವಾಗಿರದಿದ್ದರೂ, ಬಿಟ್‌ಕಾಯಿನ್ ಬಹಳ ಜನಪ್ರಿಯವಾಗಿದೆ. ವಹಿವಾಟು ನಡೆಸುವಾಗ  ಬಿಟ್‌ಕಾಯಿನನ್ನು ಸಾಮಾನ್ಯವಾಗಿ ಬಿಟಿಸಿ ಎಂದು ಕರೆಯಲಾಗುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...