alex Certify ಲೈಂಗಿಕ ಸಾಮರ್ಥ್ಯ ಕುಂದಿಸುತ್ತಂತೆ ಬಿರಿಯಾನಿ; ಟಿಎಂಸಿ ನಾಯಕನ ವಿವಾದಾತ್ಮಕ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಂಗಿಕ ಸಾಮರ್ಥ್ಯ ಕುಂದಿಸುತ್ತಂತೆ ಬಿರಿಯಾನಿ; ಟಿಎಂಸಿ ನಾಯಕನ ವಿವಾದಾತ್ಮಕ ಹೇಳಿಕೆ

ಬಿರಿಯಾನಿಯಲ್ಲಿರುವ ಮಸಾಲಾ ಪದಾರ್ಥಗಳು ಲೈಂಗಿಕ ಸಾಮರ್ಥ್ಯವನ್ನು ಕುಂದಿಸುತ್ತದೆ ಎಂದು ಹೇಳಿ ಪಶ್ಚಿಮ ಬಂಗಾಳದ ಟಿಎಂಸಿ ನಾಯಕರೊಬ್ಬರು 2 ಸ್ಥಳೀಯ ಬಿರಿಯಾನಿ ಹೋಟೆಲ್ ಗಳನ್ನು ಮುಚ್ಚಿಸಿರುವ ವಿಲಕ್ಷಣ ಘಟನೆ ನಡೆದಿದೆ.

ಕೂಚ್ ಬೆಹಾರ್ ನಲ್ಲಿ ಎರಡು ಬಿರಿಯಾನಿ ಹೋಟೆಲ್ ಮುಚ್ಚಿಸಿರುವ ಟಿಎಂಸಿ ನಾಯಕ ರವೀಂದ್ರ ನಾಥ್ ಘೋಷ್, ಈ ಹೋಟೆಲ್ನಲ್ಲಿ ತಯಾರಿಸಲಾಗುವ ಬಿರಿಯಾನಿಯಲ್ಲಿನ ಮಸಾಲ ಪದಾರ್ಥ ಪುರುಷತ್ವವನ್ನು ಕಡಿಮೆ ಮಾಡುತ್ತದೆ ಎಂದು ಆರೋಪಿಸಿದ್ದಾರೆ.

ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಚಿವರೂ ಆಗಿದ್ದ ರವೀಂದ್ರ ನಾಥ್ ಘೋಷ್, ಸ್ಥಳೀಯರು ಈ ಕುರಿತಂತೆ ತಮಗೆ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಇವುಗಳನ್ನು ಬಂದ್ ಮಾಡಿಸಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಈ ಹೋಟೆಲ್ ಗಳು ಸ್ಥಳೀಯಾಡಳಿತದಿಂದ ಪರವಾನಿಗೆಯನ್ನೂ ಪಡೆದಿರಲಿಲ್ಲ ಎಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...