
ಬಿರಿಯಾನಿಯಲ್ಲಿರುವ ಮಸಾಲಾ ಪದಾರ್ಥಗಳು ಲೈಂಗಿಕ ಸಾಮರ್ಥ್ಯವನ್ನು ಕುಂದಿಸುತ್ತದೆ ಎಂದು ಹೇಳಿ ಪಶ್ಚಿಮ ಬಂಗಾಳದ ಟಿಎಂಸಿ ನಾಯಕರೊಬ್ಬರು 2 ಸ್ಥಳೀಯ ಬಿರಿಯಾನಿ ಹೋಟೆಲ್ ಗಳನ್ನು ಮುಚ್ಚಿಸಿರುವ ವಿಲಕ್ಷಣ ಘಟನೆ ನಡೆದಿದೆ.
ಕೂಚ್ ಬೆಹಾರ್ ನಲ್ಲಿ ಎರಡು ಬಿರಿಯಾನಿ ಹೋಟೆಲ್ ಮುಚ್ಚಿಸಿರುವ ಟಿಎಂಸಿ ನಾಯಕ ರವೀಂದ್ರ ನಾಥ್ ಘೋಷ್, ಈ ಹೋಟೆಲ್ನಲ್ಲಿ ತಯಾರಿಸಲಾಗುವ ಬಿರಿಯಾನಿಯಲ್ಲಿನ ಮಸಾಲ ಪದಾರ್ಥ ಪುರುಷತ್ವವನ್ನು ಕಡಿಮೆ ಮಾಡುತ್ತದೆ ಎಂದು ಆರೋಪಿಸಿದ್ದಾರೆ.
ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಚಿವರೂ ಆಗಿದ್ದ ರವೀಂದ್ರ ನಾಥ್ ಘೋಷ್, ಸ್ಥಳೀಯರು ಈ ಕುರಿತಂತೆ ತಮಗೆ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಇವುಗಳನ್ನು ಬಂದ್ ಮಾಡಿಸಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಈ ಹೋಟೆಲ್ ಗಳು ಸ್ಥಳೀಯಾಡಳಿತದಿಂದ ಪರವಾನಿಗೆಯನ್ನೂ ಪಡೆದಿರಲಿಲ್ಲ ಎಂದು ಅವರು ಹೇಳಿದ್ದಾರೆ.