ಮಾತೃವಿಯೋಗದ ಶೋಕದಲ್ಲಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಜನ್ಮದಿನದ ಪ್ರಯುಕ್ತ ಭಾವನಾತ್ಮಕ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.
ತಾಯಿ ಜೊತೆಗೆ ಇರುವ ಸುಂದರವಾದ ಫೋಟೊ ಶೇರ್ ಮಾಡಿರುವ ಅಕ್ಷಯ್ ಮನಮಿಡಿಯುವ ಸಾಲುಗಳನ್ನು ಬಡೆದಿದ್ದಾರೆ.
ಅಕ್ಷಯ್ ಕುಮಾರ್ರ ತಾಯಿ ಅರುಣಾ ಭಾಟಿಯಾ ಬುಧವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಬಾಲಿವುಡ್ ಖಿಲಾಡಿ ಜನತೆಗೆ ಮಾಹಿತಿ ನೀಡಿದ್ದರು.
ಈ ರೀತಿ ಆಗೋದನ್ನು ನಾನು ಎಂದಿಗೂ ಇಷ್ಟಪಡುವುದಿಲ್ಲ ಆದರೆ ನನ್ನ ತಾಯಿ ಎಲ್ಲಿದ್ದಾರೋ ಅಲ್ಲಿಂದಲೇ ನನಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ ಎಂಬುದು ನನಗೆ ಖಾತ್ರಿಯಿದೆ. ಸಂತಾಪ ಸೂಚಿಸಿದ ಹಾಗೂ ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದಗಳು. ಜೀವನ ನಡೆಯುತ್ತಿರುತ್ತದೆ ಎಂದು ಬರೆದುಕೊಂಡಿದ್ದಾರೆ.
https://www.instagram.com/p/CTlpqdctme6/?utm_source=ig_web_copy_link