ಕೋವಿಡ್ 19 ವಿರುದ್ಧ ಎಂಆರ್ಎನ್ಎ ಲಸಿಕೆ ಅಭಿವೃದ್ಧಿಪಡಿಸಿದ್ದ ಭಾರತ್ ಬಯೋಟೆಕ್ ಇದೀಗ ಇದೇ ತಂತ್ರಜ್ಞಾನವನ್ನ ಬಳಕೆ ಮಾಡಿಕೊಂಡು ಮಲೇರಿಯಾ ವಿರುದ್ಧ ಮೊಟ್ಟ ಮೊದಲ ಎಂಆರ್ಎನ್ಎ ಲಸಿಕೆ ಅಭಿವೃದ್ಧಿಪಡಿಸಲು ಮುಂದಾಗಿದೆ. 2022ರಲ್ಲಿ ಲಸಿಕೆಯನ್ನ ಮಾರುಕಟ್ಟೆಗೆ ತರುವ ಗುರಿಯನ್ನ ಇಟ್ಟುಕೊಂಡು ಕ್ಲಿನಿಕಲ್ ಪ್ರಯೋಗ ನಡೆಸಲು ಚಿಂತನೆ ಮಾಡಲಾಗ್ತಿದೆ.
ಬಯೋಟೆಕ್ ಅಭಿವೃದ್ಧಿಪಡಿಸಲು ಹೊರಟಿರುವ ಮಲೇರಿಯಾ ಲಸಿಕೆಯು ಸೊಳ್ಳೆಯಿಂದ ಹರಡುವ ರೋಗಗಳನ್ನ ನಿರ್ಮೂಲನೆ ಮಾಡಲು ಕೆನುಪ್ ಫೌಂಡೇಶನ್ ನೇತೃತ್ವದ ‘ ಮಲೇರಿಯಾ ನಿರ್ಮೂಲನೆ’ ಯೋಜನೆಯ ಒಂದು ಭಾಗವಾಗಿದೆ. ಈ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಆಫ್ರಿಕಾ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ & ಪ್ರಿವೆನ್ಶನ್ ಕೂಡ ಬೆಂಬಲ ನೀಡ್ತಿದೆ.