alex Certify ಬೈಕ್ ಬಣ್ಣ, ಸೈಲೆನ್ಸರ್ ಬದಲಿಸಿದ್ದ ಸವಾರನಿಗೆ ಬಿಗ್ ಶಾಕ್: 6,500 ರೂ. ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್ ಬಣ್ಣ, ಸೈಲೆನ್ಸರ್ ಬದಲಿಸಿದ್ದ ಸವಾರನಿಗೆ ಬಿಗ್ ಶಾಕ್: 6,500 ರೂ. ದಂಡ

ಶಿವಮೊಗ್ಗ: ಬೈಕ್ ಬಣ್ಣ ಬದಲಿಸಿ ಜೋರಾಗಿ ಶಬ್ದ ಬರುವಂತೆ ಸೈಲೆನ್ಸರ್ ಬದಲಾವಣೆ ಮಾಡಿಕೊಂಡಿದ್ದ ಸವಾರನಿಗೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ಜೆ.ಎಂ.ಎಫ್.ಸಿ. ನ್ಯಾಯಾಲಯ 6500 ರೂ. ದಂಡ ವಿಧಿಸಿದೆ.

ಭದ್ರಾವತಿಯ ಹೊಸ ಮನೆ ನಿವಾಸಿ ಗಗನ್(25) ಇಷ್ಟೊಂದು ಮೊತ್ತದ ದಂಡ ಪಾವತಿಸಬೇಕಿದೆ. ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಜಯಶ್ರೀ ಸರ್ಕಲ್ ಬಳಿ ಗಗನ್ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡಿದ್ದ.

ಅಲ್ಲದೇ, ಈತ ಬೈಕ್ ನ ಬಣ್ಣ ಬದಲಿಸಿ ಜೋರಾಗಿ ಶಬ್ದ ಬರುವಂತೆ ಸೈಲೆನ್ಸರ್ ಬದಲಾವಣೆ ಮಾಡಿದ್ದ. ಪೊಲೀಸರು ತಪಾಸಣೆ ನಡೆಸಿ ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಆಲಿಸಿದ ಜೆಎಂಎಫ್ಸಿ ನ್ಯಾಯಾಲಯ 6500 ರೂ. ದಂಡ ವಿಧಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...