alex Certify ಮಾನವ ಕಳ್ಳಸಾಗಣೆ ಬಗ್ಗೆ ಜಾಗೃತಿ ಮೂಡಿಸಲು ಬೈಕ್‌ ಜಾಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವ ಕಳ್ಳಸಾಗಣೆ ಬಗ್ಗೆ ಜಾಗೃತಿ ಮೂಡಿಸಲು ಬೈಕ್‌ ಜಾಥ

ಮಾನವ ಕಳ್ಳ ಸಾಗಾಣೆ ಸಮಸ್ಯೆ ಕುರಿತು ಅರಿವು ಮೂಡಿಸಲು ಒಯಾಸಿಸ್ ಇಂಡಿಯಾದ ಮುಕ್ತಿ ಬೈಕ್ ಚಾಲೆಂಜ್ ಸಂಸ್ಥೆಯಿಂದ ಬೆಂಗಳೂರಿನಿಂದ ಮುಂಬೈಗೆ ಬೈಕ್ ಜಾಥ ಹಮ್ಮಿಕೊಂಡಿದ್ದು, ಅಕ್ಟೋಬರ್‌ 4 ರಂದು ಇದು ಮುಂಬೈ ತಲುಪಲಿದೆ.

ಮೈಸೂರು ರಸ್ತೆಯಿಂದ ಬೈಕ್‌ ಜಾಥ ಆರಂಭವಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ ಪ್ರತಿದಿನ 8 ಮಕ್ಕಳನ್ನು ಕಳ್ಳ ಸಾಗಾಣೆ ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಮಾನವ ಕಳ್ಳಸಾಗಣೆ ದಂಧೆಯಿಂದ ಸಿಸಿಬಿ ಪೊಲೀಸರು ರಕ್ಷಿಸಿದ 55 ಜನರಲ್ಲಿ 18 ಮಕ್ಕಳು, 22 ಮಹಿಳೆಯರು ಮತ್ತು 7 ಪುರುಷರು ಸೇರಿದ್ದಾರೆ. ಸಂತ್ರಸ್ತರು ನಗರದಾದ್ಯಂತ ಸಂಚಾರ ಜಂಕ್ಷನ್ ಗಳಲ್ಲಿ ಭಿಕ್ಷೆ ಬೇಡುತ್ತಿದ್ದರು. ಮಕ್ಕಳಿಗೆ ಬಲವಂತವಾಗಿ ಮಾದಕವಸ್ತು ನೀಡಿ ಮಹಿಳೆಯರು ತಮ್ಮ ತೋಳುಗಳಲ್ಲಿ ಹೊತ್ತುಕೊಂಡಿದ್ದಾರೆ ಭಿಕ್ಷಾಟನೆ ಮಾಡುತ್ತಿದ್ದರು.

ಈ ಆತಂಕಕಾರಿ ವಿಚಾರದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ತುರ್ತು ಕ್ರಮದ ಅಗತ್ಯವನ್ನು ಇದು ಎತ್ತಿ ತೋರಿಸುತ್ತದೆ. ಒಯಾಸಿಸ್ ಇಂಡಿಯಾದ ಉಪಕ್ರಮವಾದ ಮುಕ್ತಿ ಬೈಕ್ ಚಾಲೆಂಜ್ 2017 ರಲ್ಲಿ ಪ್ರಾರಂಭವಾಗಿದ್ದು, ಈ ನಿರ್ಣಾಯಕ ಸಮಸ್ಯೆಯನ್ನು ಪರಿಹರಿಸುವಲ್ಲಿ ಮುಂಚೂಣಿಯಲ್ಲಿದೆ.

ಬೈಕ್‌ ಜಾಥ ಹಾಸನ, ಮಂಗಳೂರು, ಉಡುಪಿ, ಕುಮಟಾ, ಬೆಳಗಾವಿ, ಮಿರಜ್, ಪುಣೆ ಮೂಲಕ ಮುಂಬೈನಲ್ಲಿ ಕೊನೆಗೊಳ್ಳಲಿದೆ. ಅಂದು ಸೆಂಟ್ರಲ್ ಮುಂಬೈನ ವೈ.ಎಂ.ಸಿ.ಎ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...