ಮಾನವ ಕಳ್ಳ ಸಾಗಾಣೆ ಸಮಸ್ಯೆ ಕುರಿತು ಅರಿವು ಮೂಡಿಸಲು ಒಯಾಸಿಸ್ ಇಂಡಿಯಾದ ಮುಕ್ತಿ ಬೈಕ್ ಚಾಲೆಂಜ್ ಸಂಸ್ಥೆಯಿಂದ ಬೆಂಗಳೂರಿನಿಂದ ಮುಂಬೈಗೆ ಬೈಕ್ ಜಾಥ ಹಮ್ಮಿಕೊಂಡಿದ್ದು, ಅಕ್ಟೋಬರ್ 4 ರಂದು ಇದು ಮುಂಬೈ ತಲುಪಲಿದೆ.
ಮೈಸೂರು ರಸ್ತೆಯಿಂದ ಬೈಕ್ ಜಾಥ ಆರಂಭವಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ ಪ್ರತಿದಿನ 8 ಮಕ್ಕಳನ್ನು ಕಳ್ಳ ಸಾಗಾಣೆ ಮಾಡಲಾಗುತ್ತಿದೆ.
ಬೆಂಗಳೂರಿನಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಮಾನವ ಕಳ್ಳಸಾಗಣೆ ದಂಧೆಯಿಂದ ಸಿಸಿಬಿ ಪೊಲೀಸರು ರಕ್ಷಿಸಿದ 55 ಜನರಲ್ಲಿ 18 ಮಕ್ಕಳು, 22 ಮಹಿಳೆಯರು ಮತ್ತು 7 ಪುರುಷರು ಸೇರಿದ್ದಾರೆ. ಸಂತ್ರಸ್ತರು ನಗರದಾದ್ಯಂತ ಸಂಚಾರ ಜಂಕ್ಷನ್ ಗಳಲ್ಲಿ ಭಿಕ್ಷೆ ಬೇಡುತ್ತಿದ್ದರು. ಮಕ್ಕಳಿಗೆ ಬಲವಂತವಾಗಿ ಮಾದಕವಸ್ತು ನೀಡಿ ಮಹಿಳೆಯರು ತಮ್ಮ ತೋಳುಗಳಲ್ಲಿ ಹೊತ್ತುಕೊಂಡಿದ್ದಾರೆ ಭಿಕ್ಷಾಟನೆ ಮಾಡುತ್ತಿದ್ದರು.
ಈ ಆತಂಕಕಾರಿ ವಿಚಾರದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ತುರ್ತು ಕ್ರಮದ ಅಗತ್ಯವನ್ನು ಇದು ಎತ್ತಿ ತೋರಿಸುತ್ತದೆ. ಒಯಾಸಿಸ್ ಇಂಡಿಯಾದ ಉಪಕ್ರಮವಾದ ಮುಕ್ತಿ ಬೈಕ್ ಚಾಲೆಂಜ್ 2017 ರಲ್ಲಿ ಪ್ರಾರಂಭವಾಗಿದ್ದು, ಈ ನಿರ್ಣಾಯಕ ಸಮಸ್ಯೆಯನ್ನು ಪರಿಹರಿಸುವಲ್ಲಿ ಮುಂಚೂಣಿಯಲ್ಲಿದೆ.
ಬೈಕ್ ಜಾಥ ಹಾಸನ, ಮಂಗಳೂರು, ಉಡುಪಿ, ಕುಮಟಾ, ಬೆಳಗಾವಿ, ಮಿರಜ್, ಪುಣೆ ಮೂಲಕ ಮುಂಬೈನಲ್ಲಿ ಕೊನೆಗೊಳ್ಳಲಿದೆ. ಅಂದು ಸೆಂಟ್ರಲ್ ಮುಂಬೈನ ವೈ.ಎಂ.ಸಿ.ಎ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ.