alex Certify Watch Video | ಮಕ್ಕಳಿಗೆ ವಿಶಿಷ್ಟ ರೀತಿಯಲ್ಲಿ ಬಣ್ಣಗಳ ಪರಿಚಯ ಮಾಡಿಸಿದ ಶಿಕ್ಷಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಮಕ್ಕಳಿಗೆ ವಿಶಿಷ್ಟ ರೀತಿಯಲ್ಲಿ ಬಣ್ಣಗಳ ಪರಿಚಯ ಮಾಡಿಸಿದ ಶಿಕ್ಷಕ

ಸಮಸ್ತಿಪುರ: ಬಿಹಾರದ ಸಮಸ್ತಿಪುರದಿಂದ ವೈರಲ್ ಆಗಿರುವ ಇತ್ತೀಚಿನ ವೀಡಿಯೊದಲ್ಲಿ, ಶಾಲೆಯ ಶಿಕ್ಷಕರೊಬ್ಬರು ವಿಶಿಷ್ಟ ಶೈಲಿಯಲ್ಲಿ ತರಗತಿ ತೆಗೆದುಕೊಳ್ಳುವುದನ್ನು ಕಾಣಬಹುದು.

ವೀಡಿಯೋದಲ್ಲಿ ಶಿಕ್ಷಕರು ಬಣ್ಣದ ಹೆಸರನ್ನು ಸಾಹಿತ್ಯವಾಗಿ ಹಾಡುತ್ತಿರುವುದನ್ನು ಕಾಣಬಹುದು, ಇದು ವಿದ್ಯಾರ್ಥಿಗಳು ಬಣ್ಣಗಳನ್ನು ಗುರುತಿಸುವಂತೆ ಮಾಡುವ ವಿಶಿಷ್ಟ ವಿಧಾನವಾಗಿದೆ. ಹೋಳಿ ಹಬ್ಬದಂದು ಈ ವಿಡಿಯೋ ವೈರಲ್ ಆಗಿದ್ದು, ಪಾಠದ ಮೌಲ್ಯವನ್ನು ಹೆಚ್ಚಿಸಿದೆ.

@kumarprakash4u ಎಂಬ ಟ್ವಿಟರ್​ ಬಳಕೆದಾರರು ಈ ವಿಡಿಯೋ ಶೇರ್​ ಮಾಡಿದ್ದಾರೆ. ಇಂಗ್ಲಿಷ್‌ನಲ್ಲಿ ವಿವಿಧ ಬಣ್ಣಗಳ ಹೆಸರುಗಳನ್ನು ಹಾಡುವುದು ಮತ್ತು ಹಿಂದಿಯಲ್ಲಿ ಮಕ್ಕಳಿಗೆ ಅರ್ಥವನ್ನು ವಿವರಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಬೈಜನಾಥ್ ರಜಾಕ್​ ಎಂಬ ಶಿಕ್ಷಕ ಈ ಹೊಸ ಯೋಚನೆ ಮಾಡಿದ್ದು, ಮಕ್ಕಳಿಗೆ ಬಣ್ಣಗಳ ಕುರಿತು ಹೇಳುತ್ತಿದ್ದಾರೆ.

ಈ ಶಿಕ್ಷಕನಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಭಲೆ ಭಲೆ ಎನ್ನುವ ಹಲವು ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...