ಸಮಸ್ತಿಪುರ: ಬಿಹಾರದ ಸಮಸ್ತಿಪುರದಿಂದ ವೈರಲ್ ಆಗಿರುವ ಇತ್ತೀಚಿನ ವೀಡಿಯೊದಲ್ಲಿ, ಶಾಲೆಯ ಶಿಕ್ಷಕರೊಬ್ಬರು ವಿಶಿಷ್ಟ ಶೈಲಿಯಲ್ಲಿ ತರಗತಿ ತೆಗೆದುಕೊಳ್ಳುವುದನ್ನು ಕಾಣಬಹುದು.
ವೀಡಿಯೋದಲ್ಲಿ ಶಿಕ್ಷಕರು ಬಣ್ಣದ ಹೆಸರನ್ನು ಸಾಹಿತ್ಯವಾಗಿ ಹಾಡುತ್ತಿರುವುದನ್ನು ಕಾಣಬಹುದು, ಇದು ವಿದ್ಯಾರ್ಥಿಗಳು ಬಣ್ಣಗಳನ್ನು ಗುರುತಿಸುವಂತೆ ಮಾಡುವ ವಿಶಿಷ್ಟ ವಿಧಾನವಾಗಿದೆ. ಹೋಳಿ ಹಬ್ಬದಂದು ಈ ವಿಡಿಯೋ ವೈರಲ್ ಆಗಿದ್ದು, ಪಾಠದ ಮೌಲ್ಯವನ್ನು ಹೆಚ್ಚಿಸಿದೆ.
@kumarprakash4u ಎಂಬ ಟ್ವಿಟರ್ ಬಳಕೆದಾರರು ಈ ವಿಡಿಯೋ ಶೇರ್ ಮಾಡಿದ್ದಾರೆ. ಇಂಗ್ಲಿಷ್‌ನಲ್ಲಿ ವಿವಿಧ ಬಣ್ಣಗಳ ಹೆಸರುಗಳನ್ನು ಹಾಡುವುದು ಮತ್ತು ಹಿಂದಿಯಲ್ಲಿ ಮಕ್ಕಳಿಗೆ ಅರ್ಥವನ್ನು ವಿವರಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಬೈಜನಾಥ್ ರಜಾಕ್ ಎಂಬ ಶಿಕ್ಷಕ ಈ ಹೊಸ ಯೋಚನೆ ಮಾಡಿದ್ದು, ಮಕ್ಕಳಿಗೆ ಬಣ್ಣಗಳ ಕುರಿತು ಹೇಳುತ್ತಿದ್ದಾರೆ.
ಈ ಶಿಕ್ಷಕನಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಭಲೆ ಭಲೆ ಎನ್ನುವ ಹಲವು ಕಮೆಂಟ್ಗಳ ಸುರಿಮಳೆಯಾಗುತ್ತಿದೆ.