ಶಾಲೆಯಲ್ಲಿ ಪಾಠ ಮಾಡೋದು, ಬಿಸಿಯೂಟ ಬಡಿಸೋದು, ಚುನಾವಣೆ ಕರ್ತವ್ಯ, ಸೆನ್ಸಸ್ ಡ್ಯೂಟಿಗಳನ್ನು ಮಾಡೋದ್ರಲ್ಲಿ ಅದಾಗಲೇ ನಿರತರಾಗಿರುವ ಸರ್ಕಾರಿ ಶಾಲಾ ಶಿಕ್ಷಕರಿಗೆ ಬಿಹಾರ ಸರ್ಕಾರ ಹೊಸ ಜವಾಬ್ದಾರಿಯೊಂದನ್ನು ಹೆಗಲ ಮೇಲೆ ಇಟ್ಟಿದೆ.
ಏಪ್ರಿಲ್ 2016ರಿಂದಲೂ ರಾಜ್ಯದಲ್ಲಿ ಮದ್ಯಪಾನ ನಿಷೇಧವಾಗಿರುವ ಹಿನ್ನೆಲೆಯಲ್ಲಿ, ಹೆಂಡದ ಸೇವನೆ ಹಾಗೂ ಪೂರೈಕೆಯಲ್ಲಿ ಭಾಗಿಯಾದವರು ಯಾರಾದರೂ ಕಣ್ಣಿಗೆ ಬಿದ್ದರೆ ವರದಿ ಮಾಡುವಂತೆ ಶಿಕ್ಷಕರನ್ನು ನಿತೀಶ್ ಕುಮಾರ್ ಸರ್ಕಾರ ಸೂಚಿಸಿದೆ.
ʼಹನಿಮೂನ್ʼ ಗೆ ಹೋದಾಗಲೇ ಸಿಕ್ತು ʼಬಿಗ್ ಟ್ವಿಸ್ಟ್ʼ
ರಾಜ್ಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಂಜಯ್ ಕುಮಾರ್ ಎಲ್ಲ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಖುದ್ದು ಬರೆದಿರುವ ಪತ್ರದಲ್ಲಿ, ಸರ್ಕಾರದ ಪ್ರಾಥಮಿಕ, ಮಧ್ಯಮ ಹಾಗೂ ಪ್ರೌಢಶಾಲೆಗಳ ಪ್ರಾಂಶುಪಾಲರು ಹಾಗೂ ಶಿಕ್ಷಕರಿಗೆ, ಮದ್ಯಪಾನ ಹಾಗೂ ಸಾಗಾಟದಲ್ಲಿ ಭಾಗಿಯಾಗಿರುವ ಮಂದಿಯನ್ನು ಪತ್ತೆ ಮಾಡಿ, ಅಬಕಾರಿ ಇಲಾಖೆಗೆ ತಿಳಿಸುವಂತೆ ಸೂಚಿಸಲು ಹೇಳಲಾಗಿದೆ. ಈ ಸಂಬಂಧ ದೂರವಾಣಿ ಸಂಖ್ಯೆಗಳಾದ — 9473400378 ಮತ್ತು 9473400606 ಅಥವಾ ಟೋಲ್ ಫ್ರೀ ಶುಲ್ಕಗಳಾದ 18003456268 ಅಥವಾ 15545ಗೆ ಕರೆ ಮಾಡಲು ಸೂಚಿಸಲಾಗಿದೆ.