alex Certify SHOCKING: ಶಸ್ತ್ರಸಜ್ಜಿತ ದರೋಡೆಕೋರರಿಂದ ಆಭರಣ ಮಳಿಗೆ ಲೂಟಿ, ಗುಂಡಿಕ್ಕಿ ಮಾಲೀಕನ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಶಸ್ತ್ರಸಜ್ಜಿತ ದರೋಡೆಕೋರರಿಂದ ಆಭರಣ ಮಳಿಗೆ ಲೂಟಿ, ಗುಂಡಿಕ್ಕಿ ಮಾಲೀಕನ ಹತ್ಯೆ

ಪಾಟ್ನಾ: ಐವರು ಶಸ್ತ್ರಸಜ್ಜಿತ ವ್ಯಕ್ತಿಗಳು ಆಭರಣ ಮಳಿಗೆಯೊಂದರಲ್ಲಿ ಮಾರಣಾಂತಿಕ ದರೋಡೆ ನಡೆಸಿದ ಘಟನೆ ಹಾಜಿಪುರದಲ್ಲಿ ನಡೆದಿದೆ.

ಈ ಭಯಾನಕ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಐವರು ಮುಸುಕುಧಾರಿಗಳು ಹಾಜಿಪುರದ ಸುಭಾಷ್ ಮತ್ತು ಮದಾಯಿ ಚೌಕ್‌ ಗಳ ಮಧ್ಯದಲ್ಲಿರುವ ನೀಲಂ ಆಭರಣ ಮಳಿಗೆಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು.

ನಂತರ ಅವರು ಗ್ರಾಹಕರಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದು, ಅಂಗಡಿಯ ಮಾಲೀಕ ಸುನೀಲ್ ಪ್ರಿಯದರ್ಶಿ ಲೂಟಿಯ ಪ್ರಯತ್ನವನ್ನು ವಿರೋಧಿಸಲು ಪ್ರಯತ್ನಿಸಿದಾಗ, ದರೋಡೆಕೋರರು ಹೊಟ್ಟೆಗೆ ಗುಂಡು ಹಾರಿಸುವ ಮೊದಲು ಅವರನ್ನು ಕ್ರೂರವಾಗಿ ಥಳಿಸಿದ್ದಾರೆ. ಜೂನ್ 22 ರಂದು ರಾತ್ರಿ 8 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಅಂಗಡಿಯಲ್ಲಿದ್ದ ನಗದು ಮತ್ತು ಚಿನ್ನಾಭರಣ ದೋಚಿದ ನಂತರ ಮತ್ತು ಮಾಲೀಕರಿಗೆ ಗುಂಡು ಹಾರಿಸಿ ಐವರು ಶಸ್ತ್ರಸಜ್ಜಿತ ದರೋಡೆಕೋರರು ಪರಾರಿಯಾಗಿದ್ದಾರೆ.

ಅಂಗಡಿ ಮಾಲೀಕ ಸುನೀಲ್ ಪ್ರಿಯದರ್ಶಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ವೇಳೆಗೆ ಅವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಕ್ಷಣ ತನಿಖೆಗೆ ಆದೇಶಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...