alex Certify ಗನ್ ಸಮೇತ ನ್ಯಾಯಾಲಯಕ್ಕೆ ಬಂದ ವಕೀಲ: ಅರೆಸ್ಟ್ ಮಾಡಿಸಿದ ನ್ಯಾಯಾಧೀಶರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗನ್ ಸಮೇತ ನ್ಯಾಯಾಲಯಕ್ಕೆ ಬಂದ ವಕೀಲ: ಅರೆಸ್ಟ್ ಮಾಡಿಸಿದ ನ್ಯಾಯಾಧೀಶರು

ಇಂಥಾ ಘಟನೆ, ಸಾಮಾನ್ಯವಾಗಿ ಸಿನೆಮಾಗಳಲ್ಲಿ ಮಾತ್ರ ನೋಡೋದಕ್ಕೆ ಮಾತ್ರ ಸಾಧ್ಯ. ನ್ಯಾಯಾಲಯದೊಳಗೆ ಪೊಲೀಸರು ಹೊರತುಪಡಿಸಿ ಯಾರೊಬ್ಬರೂ ಗನ್ ತೆಗೆದುಕೊಂಡು ಹೋಗುವಂತಿಲ್ಲ. ಆದರೆ ಬಿಹಾರದ ವಕೀಲ ಪಂಕಜ್ ಕುಮಾರ್ ದಾಸ್ ಗನ್ ತೆಗೆದುಕೊಂಡು ಡೈರೆಕ್ಟ್ ಆಗಿ ನ್ಯಾಯಾಲಕ್ಕೆ ಹೋಗಿದ್ದಾರೆ. ಇದು ನ್ಯಾಯಾಧೀಶರಾದ ಡಿ.ಕೆ. ಪ್ರಧಾನ್‌ ಅವರ ಗಮನಕ್ಕೆ ಬಂದಿದ್ದೇ ತಡ ಅವರು ವಕೀಲ ಪಂಕಜ್ ಕುಮಾರ್ ದಾಸ್ ಬಂಧನಕ್ಕೆ ಭದ್ರತಾ ಸಿಬ್ಬಂದಿಗಳಿಗೆ ಆರ್ಡರ್ ಮಾಡಿದ್ದಾರೆ.

ಈ ಘಟನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ಕೆ. ಪ್ರಧಾನ್ ಅವರ ಕೊಠಡಿಯಲ್ಲಿ ನಡೆದಿದೆ. ಪ್ರಕರಣವೊಂದರ ವಿಚಾರಣೆ ವೇಳೆ, ವಕೀಲ ಪಂಕಜ್ ಕುಮಾರ್ ದಾಸ್ ಶಸ್ತ್ರಾಸ್ತ್ರ ಹೊಂದಿದ್ದನ್ನು ನ್ಯಾಯಾಧೀಶರು ಗಮನಿಸಿದರು. ಈ ಬಗ್ಗೆ ತಕ್ಷಣವೇ ಭದ್ರತಾ ಸಿಬ್ಬಂದಿಗಳು ತಮ್ಮ ಬಳಿಯಿದ್ದ ವಕೀಲ ದಾಸ್‌ನ ಆಯುಧವನ್ನು ತೆಗೆದುಕೊಂಡು ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸುವಂತೆ ತಿಳಿಸಿದರು.

ನ್ಯಾಯಾಧೀಶರ ಆದೇಶದ ಮೇರೆಗೆ ಪೊಲೀಸರನ್ನು ಕರೆಸಿ ವಕೀಲರನ್ನು ಆತನಿಗೆ ಒಪ್ಪಿಸಲಾಯಿತು. ವಕೀಲರ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆಯ ಸಂಬಂಧಿತ ಸೆಕ್ಷನ್ ಹಾಗೂ ಐಪಿಸಿಯ ಸೆಕ್ಷನ್ 186 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಠಾಣೆಯ ಉಸ್ತುವಾರಿ ರಾಮ್ ಸಿಂಗ್ ಹೇಳಿದ್ದಾರೆ. ನಂತರ, ವಕೀಲ ದಾಸ್ ಅವರನ್ನು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಈಗ ಸದ್ಯಕ್ಕೆ ವಕೀಲ ಪಂಕಜ್‌ ಕುಮಾರ್‌ದಾಸ್ ರನ್ನ ನ್ಯಾಯಾಂಗ ಬಂಧನದಲ್ಲಿ ಜೈಲಿಗೆ ಇರಿಸಲಾಗಿದೆ.

ಇದಾದ ನಂತರ ವಕೀಲರ ಗುಂಪು ವಕೀಲ್ ದಾಸ್ ಅವರಿಗೆ ಕ್ಷಮಾದಾನ ನೀಡುವಂತೆ ನ್ಯಾಯಾಧೀಶ ಡಿಕೆ ಪ್ರಧಾನ್‌ ಅವರಿಗೆ ಮನವಿ ಮಾಡಿದ್ದಾರೆ. ಆದರೆ, ಈ ವಿಚಾರದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಸ್ಪಷ್ಟವಾಗಿ ಹೇಳಿದ್ದಾರೆ.

ವಕೀಲರ ಬಂಧನದ ವಿರುದ್ಧ, ನ್ಯಾಯಾಧೀಶರ ಮುಂದೆ ನ್ಯಾಯವಾದಿಗಳು ಪ್ರತಿಭಟನೆ ಮಾಡುವುದಾಗಿ ಮುಜಾಫರ್‌ಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷ ರಾಮಕೃಷ್ಣ ಠಾಕೂರ್ ಮಾಧ್ಯಮದ ಮುಂದೆ ಹೇಳಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...