alex Certify BIGG NEWS: ರಾಜ್ಯದಲ್ಲಿ `RAPIDO ಬೈಕ್’ ನಿಷೇಧ : ಸಾರಿಗೆ ಸಚಿವರಿಂದ ಮಹತ್ವದ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS: ರಾಜ್ಯದಲ್ಲಿ `RAPIDO ಬೈಕ್’ ನಿಷೇಧ : ಸಾರಿಗೆ ಸಚಿವರಿಂದ ಮಹತ್ವದ ಹೇಳಿಕೆ

ಬೆಂಗಳೂರು : ರ್ಯಾಪಿಡೋ ಬೈಕ್ ಟ್ಯಾಕ್ಸಿಗೆ ನಿರ್ಬಂಧ ಹೇರುವುದು ನನ್ನ ಜವಾಬ್ದಾರಿ, ಖಂಡಿತ ನಿಷೇಧ ಹೇರುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಬೆಂಗಳೂರಿನ ಶಾಂತಿನಗರದ ಸಾರಿಗೆ ಇಲಾಖೆ ಕೇಂದ್ರ ಕಚೇರಿಯಲ್ಲಿ ನಡೆದ ಖಾಸಗಿ ಸಾರಿಗೆ ಒಕ್ಕಟದ ಸಭೆಯಲ್ಲಿ ಮಾತನಾಡಿದ ಸಚಿವರು ‘ರ್ಯಾಪಿಡೋ ಬೈಕ್ ಟ್ಯಾಕ್ಸಿಗೆ ನಿರ್ಬಂಧ ಹೇರುವುದು ನನ್ನ ಜವಾಬ್ದಾರಿ, ಖಂಡಿತ ನಿಷೇಧ ಹೇರುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಇದೇ ವೇಳೆ 50000 ಓಲಾ, ಉಬರ್ ಕ್ಯಾಬ್ಗಳ ಪೈಕಿ 25000 ಕ್ಯಾಬ್ ಕಪ್ಪು ಪಟ್ಟಿಗೆ ಸೇರಿವೆ. ಕಪ್ಪುಪಟ್ಟಿಗೆ ಸೇರಿಸಿರುವ ಚಾಲಕರ ಪಟ್ಟಿ ಕೈಬಿಡುವಂತೆ ಸಚಿವರಿಗೆ ಒಕ್ಕೂಟದ ಸದಸ್ಯ ನಾರಾಯಣಸ್ವಾಮಿ ಮನವಿ ಮಾಡಿದರು.

ಖಾಸಗಿ ಬಸ್ಸುಗಳಿಗೂ ‘ಶಕ್ತಿ ಯೋಜನೆ’ ವಿಸ್ತರಣೆ ಮಾಡುವಂತೆ ಖಾಸಗಿ ಬಸ್ ಸಂಘಟನೆಗಳು ಒತ್ತಾಯಿಸಿದ್ದು, ಈ ಕುರಿತು ಸಾರಿಗೆ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.ಖಾಸಗಿ ಬಸ್ಸುಗಳಿಗೂ ಶಕ್ತಿ ಯೋಜನೆ ವಿಸ್ತರಣೆ ಬಗ್ಗೆ ಸಿಎಂ ಜೊತೆ ಸದ್ಯದಲ್ಲೇ ಚರ್ಚೆ ಮಾಡಲಾಗುತ್ತದೆ ಎಂದರು.

ಶಕ್ತಿ’ ಯೋಜನೆಯಿಂದ ಆಗಿರುವ ತೊಂದರೆ ಪರಿಹರಿಸುವಂತೆ ಒತ್ತಾಯಿಸಿ ಜು.27 ರಂದು ನಗರದಲ್ಲಿ ಆಟೋರಿಕ್ಷಾ, ಖಾಸಗಿ ಬಸ್, ಓಲಾ- ಊಬರ್, ಮ್ಯಾಕ್ಸಿಕ್ಯಾಬ್ಗಳ ಮಾಲೀಕ, ಚಾಲಕರು ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. .ಶಕ್ತಿ ಯೋಜನೆಯಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಆಟೋರಿಕ್ಷಾ ಸೇರಿ ಸಾರ್ವ ಜನಿಕ ಸೇವೆಯ ಖಾಸಗಿ ವಾಹನ ಚಾಲಕರಿಗೆ ಮಾಸಿಕ 10 ಸಾವಿರ ಪರಿಹಾರಕ್ಕೆ ಒತ್ತಾಯಿಸಿ ರಾಯಣ್ಣ ವೃತ್ತದಿಂದ ನಗರದಲ್ಲಿ ಸಾವಿರಾರು ಚಾಲಕರು ಸೇರಿ ರ್ಯಾಲಿ ನಡೆಸಿ, ಸ್ವಾತಂತ್ರ್ಯ ಉದ್ಯಾನದಲ್ಲಿ ಸಂಜೆ 7 ಗಂಟೆವರೆಗೆ ಧರಣಿ ನಡೆಸಲು ನಿರ್ಧಾರ ಮಾಡಿರುವುದಾಗಿ ಖಾಸಗಿ ಸಾರಿಗೆ ಸಂಘಟನೆಗಳು ಘೋಷಿಸಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಜುಲೈ 27 ರಂದು ಬಂದ್ ಗೆ ಕರೆ ನೀಡಿದೆ. ಸಾರಿಗೆ ಸಂಘಟನೆ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕೂಡ ಬೆಂಬಲ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...