alex Certify BIGG NEWS : ರಾಜ್ಯದ ರೈತರಿಗೆ `ಕರೆಂಟ್’ ಶಾಕ್ : ಆದ್ಯತೆ ಮೇರೆಗೆ ವಿದ್ಯುತ್ ಪೂರೈಕೆ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ರಾಜ್ಯದ ರೈತರಿಗೆ `ಕರೆಂಟ್’ ಶಾಕ್ : ಆದ್ಯತೆ ಮೇರೆಗೆ ವಿದ್ಯುತ್ ಪೂರೈಕೆ!

ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್ ಕೊರತೆ ಸೃಷ್ಟಿಯಾದ್ರೆ ಕೃಷಿ ಬೆಳೆಗಳಿಗೆ ಸಮಸ್ಯೆಯಾಗದಂತೆ ಬೆಳೆ ಆಧಾರದ ಮೇಲೆ ವಿದ್ಯುತ್ ಪೂರೈಸಲು ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಬೆಳೆಗಳಿಗೆ ಸಮಸ್ಯೆಯಾಗದಂತೆ ಬೆಳೆ ಆಧಾರದ ಮೇಲೆ ವಿದ್ಯುತ್ ಪೂರೈಸಲು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ಇಂಧನ ಇಲಾಖೆ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಆದ್ಯತೆ ಮೇರೆಗೆ ರೈತರ ಬೆಳೆಗಳಿಗೆ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಕಬ್ಬು ಪ್ರಧಾನವಾಗಿರುವ ಮಂಡ್ಯದಲ್ಲಿ ಕಬ್ಬು ಬೆಳೆಗೆ ಯಾವ ತಿಂಗಳಲ್ಲಿ ಹೆಚ್ಚು ವಿದ್ಯುತ್ ಪೂರೈಕೆ ಮಾಡಬೇಕು. ಕೋಲಾರದಲ್ಲಿ ಟೊಮೊಟೋ, ವಿಜಯಪುರದಲ್ಲಿ ದ್ರಾಕ್ಷಿ, ಭತ್ತ ಬೆಳೆಯುವ ಕಡೆ ಯಾವ ಸಮಯದಲ್ಲಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...