alex Certify BIGG NEWS : ರಾಜ್ಯದಲ್ಲಿ ಮತ್ತೆ ಡೆಂಘೆ ಜ್ವರ ಅಬ್ಬರ : ಒಂದೇ ತಿಂಗಳಲ್ಲಿ 3,700 ಕೇಸ್ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ರಾಜ್ಯದಲ್ಲಿ ಮತ್ತೆ ಡೆಂಘೆ ಜ್ವರ ಅಬ್ಬರ : ಒಂದೇ ತಿಂಗಳಲ್ಲಿ 3,700 ಕೇಸ್ ಪತ್ತೆ

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಡೆಂಘೆ ಜ್ವರದ ಅಬ್ಬರ ಶುರುವಾಗಿದದು, ಕೇವಲ ಒಂದೇ ತಿಂಗಳಲ್ಲಿ 3,797 ಕೇಸ್ ಗಳು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸಂಖ್ಯೆ 10 ಸಾವಿರ ಗಡಿ ದಾಟಿದೆ.

ರಾಜ್ಯದಲ್ಲಿ ಹವಾಮಾನ ಬದಲಾವಣೆಯಿಂದ ಡೆಂಘೆ ಪ್ರಕರಣಗಳು ಹೆಚ್ಚಳವಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 5,756 ಹಾಗೂ ಇತರೆ ಜಿಲ್ಲೆಗಳಲ್ಲಿ 4,504 ಸೇರಿ ರಾಜ್ಯಾದ್ಯಂತ 10,260 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಉಡುಪಿಯಲ್ಲಿ 590, ಮೈಸೂರಿನಲ್ಲಿ 486, ಶಿವಮೊಗ್ಗದಲ್ಲಿ 264, ಕಲಬುರಗಿಯಲ್ಲಿ 219, ದಕ್ಷಿಣ ಕನ್ನಡದಲ್ಲಿ 210 ಪ್ರಕರಣಗಳು ದೃಢಪಟ್ಟಿವೆ.

ಇನ್ನೂ ರಾಜ್ಯದಲ್ಲಿ ಚಿಕೂನ್ ಗುನ್ಯಾ ಪ್ರಕಣಗಳು ಪತ್ತೆಯಾಗಿದ್ದು, 36 ಸಾವಿರಕ್ಕೂ ಅಧಿಕ ಮಂದಿ ಚಿಕೂನ್ ಗುನ್ಯಾ ಶಂಕಿತರನ್ನು ಗುರುತಿಸಲಾಗಿದೆ. ಅವರಲ್ಲಿ 1,023 ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದೆ. ಮೈಸೂರು 168 ಹಾಗೂ ವಿಜಯಪುರದಲ್ಲಿ 112 ಅಧಿಕ ಪ್ರಕರಣಗಳು ವರದಿಯಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...