
ಮುಖ್ಯವಾಗಿ ಈ ಬಿಗ್ ಬಾಸ್ ಅವತರಣಿಕೆಯಲ್ಲಿ ಗಮನ ಸೆಳೆದಿರುವ ಬಾಲಿವುಡ್ ನಟಿ ಶಿಲ್ಟಾ ಶೆಟ್ಟಿಯವರ ಕಿರಿಯ ಸೋದರಿ ಶಮಿತಾ ಶೆಟ್ಟಿಯನ್ನು ಕಾಣಲು ಬಿಗ್ ಬಾಸ್ ಮನೆಗೆ ಅವರ ತಾಯಿ ಸುನಂದಾ ಭೇಟಿ ನೀಡಿದ್ದಾರೆ.
ನನ್ನ ಬೋಲ್ಡ್ ವಿಡಿಯೋಗಳನ್ನು ಶಿಲ್ಪಾ ಶೆಟ್ಟಿ ಮೆಚ್ಚಿಕೊಂಡಿದ್ದರು: ಶೆರ್ಲಿನ್ ಚೋಪ್ರಾ
ತಾಯಿ-ಮಗಳ ನಡುವಿನ ಆಪ್ತ ಕ್ಷಣ, ಭಾವುಕ ಸಾಂತ್ವನಗಳಿಗೆ ಈ ಸಂಚಿಕೆ ಸಾಕ್ಷಿಯಾಗಿದೆ. ಶಮಿತಾ ಅವರನ್ನು ಈ ಬಾರಿಯ ವಿಜೇತ ಅಭ್ಯರ್ಥಿಗಳ ಸಾಲಿನಲ್ಲಿ ವೀಕ್ಷಕರು ಕೂರಿಸಿರುವುದು ವಿಶೇಷವಾಗಿದೆ.
ಈಗಾಗಲೇ ಶಿಲ್ಪಾ ಪತಿ ರಾಜ್ ಕುಂದ್ರಾ ಅವರು ಅಶ್ಲೀಲ ಚಿತ್ರಗಳ ಆ್ಯಪ್ ಪ್ರಕರಣಲ್ಲಿ ಆರೋಪಿಯಾಗಿದ್ದಾರೆ. ಇದರಿಂದ ಕಾನೂನು ಸಮರವನ್ನು ಕುಟುಂಬ ನಡೆಸುತ್ತಿದೆ. ಈ ಬಗ್ಗೆ ತಾಯಿಯಿಂದ ಮಾಹಿತಿಯನ್ನು ಶಮಿತಾ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಕ್ಕ ಶಿಲ್ಪಾ ಬಗ್ಗೆ ವಿಚಾರಿಸಿದ್ದಾರೆ ಕೂಡ.
ಆಕೆ ತುಂಬ ಘನತೆಯಿಂದ ಬಿಗ್ ಬಾಸ್‌ನಲ್ಲಿ ಆಟವಾಡುತ್ತಿದ್ದಾಳೆ. ಸ್ಪರ್ಧಿಗಳಲ್ಲಿ ಆಕೆ ಸಕಾರಾತ್ಮಕ ಭಾವನೆ ಹಂಚುವುದು ಆಕೆಯ ಉತ್ತಮ ಸ್ವಭಾವಗಳಲ್ಲಿ ಪ್ರಮುಖವಾದದ್ದು ಎಂದು ಸುನಂದಾ ಅವರು ಮಗಳ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಉಳಿದಂತೆ, ರಾಕೇಶ್ ಬಾಪಟ್ ಸೋದರ ಸಂಬಂಧಿ ಮತ್ತು ನೇಹಾ ಭಾಸಿನ್ ಸೋದರಿ ಕುಟುಂಬದ ವಿಶೇಷ ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
