ಬೆಂಗಳೂರು : ವರ್ತೂರು ಸಂತೋಷ್ ಗೆ ಸಂಕಷ್ಟ ಎದುರಾಗಿದ್ದು, ಜಾಮೀನು ನೀಡದಂತೆ ಸರ್ಕಾರಿ ಅಭಿಯೋಜಕರಿಂದ ಕೋರ್ಟ್ ಗೆ ಆಕ್ಷೇಪಣೆ ಸಲ್ಲಿಕೆಯಾಗಿದೆ.
ವರ್ತೂರು ಸಂತೋಷ್ ಧರಿಸಿದ್ದ ಹುಲಿ ಉಗುರು ಹೊಸದಾಗಿದ್ದು, ಅಲ್ಲದೇ ಆರೋಪಿಯೇ ಹುಲಿ ಉಗುರು ಧರಿಸುವುದನ್ನು ಒಪ್ಪಿಕೊಂಡಿದ್ದಾನೆ. ಸಂತೋಷ್ ಅಪರಾಧ ರುಜುವಾತಾಗಿದ್ದು, 3 ರಿಂದ 7 ವರ್ಷದವರೆಗೆ ವಿಧಿಸಬಹುದಾದ ಶಿಕ್ಷೆಯಾಗಿದೆ.
ಜಾಮೀನು ಅರ್ಜಿಯಲ್ಲಿ ಸುಳ್ಳು ವಿವರ ನೀಡಿ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ನೀಡಿದರೆ ಸಂತೋಷ್ ತಲೆಮರೆಸಿಕೊಳ್ಳಬಹುದು, ಅಲ್ಲದೇ ಸಾಕ್ಷ್ಯ ನಾಶಪಡಿಸಬಹುದು. ಹೀಗಾಗಿ ಆರೋಪಿ ಸಂತೋಷ್ ಗೆ ಜಾಮೀನು ನೀಡದಂತೆ ಸರ್ಕಾರಿ ಅಭಿಯೋಜಕರು ಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ಮೂಲಕ ವರ್ತೂರು ಸಂತೋಷ್ ಗೆ ಸಂಕಷ್ಟ ಎದುರಾಗಿದೆ. ನಾಳೆ ಕೋರ್ಟ್ ಏನು ಆದೇಶ ಹೊರಡಿಸುತ್ತದೆ ಎಂಬುದನ್ನ ಕಾದು ನೋಡಬೇಕಾಗಿದೆ.
‘ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಜಾಮೀನು ಅರ್ಜಿ ವಿಚಾರಣೆ ಇಂದು ಪೂರ್ಣಗೊಂಡಿದ್ದು, ನಾಳೆಗೆ ಆದೇಶ ಕಾಯ್ದಿರಿಸಲಾಗಿದೆ.
ಹುಲಿ ಉಗುರು ಧರಿಸಿ ಬಂಧನಕ್ಕೊಳಗಾದ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ ನ.6 ವರೆಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ನಂತರ ಅವರು ಬೆಂಗಳೂರಿನ ಎಸಿಜೆಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.