
ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಇನ್‌ಫ್ಲುಯೆನ್ಸರ್ ಎನಿಸಿಕೊಂಡಿರುವ ಉರ್ಫಿ ಜಾವೇದ್ ಅವರ ಪ್ರತಿ ಹೆಜ್ಜೆಯ ಬಗ್ಗೆಯೂ ಒಂದು ವರ್ಗಕ್ಕೆ ಕುತೂಹಲ.
ಬಿಗ್ ಬಾಸ್ ಜೊತೆಗೆ ಪಂಚ್ ಬೀಟ್ ಸೀಸನ್ 2, ಮೇರಿ ದುರ್ಗಾ, ಬಡೇ ಭಯ್ಯಾ ಕಿ ದುಲ್ಹನಿಯಾ ಮತ್ತು ಬೇಪನ್ನಾಹ್ ನಂತಹ ಶೋಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ. ಅವರೀಗ ಹೊಸ ಜೀಪ್ ಕಂಪಾಸ್ ಎಸ್‌ಯುವಿ ಖರೀದಿಸಿದ್ದಾರೆ.
ಹೈಡ್ರೋ ಬ್ಲೂ ಪೇಂಟ್ ನಿಂದ ಜಗಮಗಿಸುವ ಎಸ್ ಯು ವಿ ಮುಂದೆ ನಿಂತು ಉರ್ಫಿ ಕ್ಯಾಮರಾಗೆ ಫೋಸ್ ನೀಡಿ ಗಮನ ಸೆಳೆದಿದ್ದಾರೆ.
ಜೀಪ್ ಕಳೆದ ವರ್ಷ ಕಂಪಾಸ್‌ನ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಇದು ಯಾವುದೇ ಟೆಕ್ನಿಕಲ್ ಬದಲಾವಣೆಗಳೊಂದಿಗೆ ಹೊರ ಬಂದಿಲ್ಲ ಆದರೂ ಹಲವಾರು ವೈಶಿಷ್ಟ್ಯಗಳ ಸೇರ್ಪಡೆಗಳಾಗಿವೆ.


