
11ನೇ ಬಾರಿಗೆ ಸಲ್ಮಾನ್ ಖಾನ್ ಬಿಗ್ಬಾಸ್ ಸಾರಥ್ಯ ವಹಿಸಲಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯು ಕೂಡ ಸ್ಪರ್ಧಿಗಳು ಯಾರ್ಯಾರು ಇರಬಹುದು ಎಂಬ ಚರ್ಚೆ ಜೋರಾಗಿದೆ.
ಬಿಗ್ಬಾಸ್ ಒಟಿಟಿ ಫೈನಲ್ ಸಂದರ್ಭದಲ್ಲಿ ಪ್ರತೀಕ್ ಸೆಹಜ್ಪಾಲ್ ತಾವು ಸೀಸನ್ 15ರಲ್ಲಿ ಭಾಗಿಯಾಗೋದಾಗಿ ಘೋಷಣೆ ಮಾಡಿದ್ದರು. ಇವರ ಜೊತೆಯಲ್ಲಿ ಇನ್ನೂ ಯಾರ್ಯಾರು ಈ ಶೋನಲ್ಲಿ ಇರ್ತಾರೆ ಎಂಬ ಪಟ್ಟಿ ಇಲ್ಲಿದೆ ನೋಡಿ.
ಉಮರ್ ರಿಯಾಜ್
ಉಮರ್ ರಿಯಾಜ್ ಈಗಾಗಲೇ ಬಿಗ್ಬಾಸ್ ಶೋನಲ್ಲಿ ಕಾಣಿಸಿಕೊಂಡಿರುವ ಆಸಿಮ್ ರಿಯಾಜ್ರ ಸಹೋದರನಾಗಿದ್ದಾರೆ. ಇವರು ಮನರಂಜನಾ ಕ್ಷೇತ್ರದಲ್ಲಿ ಕಾಣಿಸಿಕೊಂಡವರಲ್ಲ. ವೃತ್ತಿಯಲ್ಲಿ ವೈದ್ಯನಾಗಿರುವ ಉಮರ್ ಈ ಬಾರಿಯ ಬಿಗ್ಬಾಸ್ನಲ್ಲಿ ಯಾವ ರೀತಿಯಲ್ಲಿ ಕಾಣಿಸಿಕೊಳ್ಳಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇವರು ಟ್ವಿಟರ್ನಲ್ಲಿ ತಾವು ಬಿಗ್ಬಾಸ್ನಲ್ಲಿ ಕಾಣಿಸಿಕೊಳ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಶಮಿತಾ ಶೆಟ್ಟಿ
ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಬಿಗ್ಬಾಸ್ ಒಟಿಟಿಯಲ್ಲಿ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಶಮಿತಾ ತಾವು ಬಿಗ್ಬಾಸ್ ಸೀಸನ್ 15ರಲ್ಲಿ ಕಾಣಿಸಿಕೊಳ್ತಿರುವ ಬಗ್ಗೆ ಕನ್ಫರ್ಮ್ ಮಾಡಿದ್ದಾರೆ. ಬಿಗ್ಬಾಸ್ ಒಟಿಟಿಯಲ್ಲಿ ಶಮಿತಾ ಸೆಕೆಂಡ್ ರನ್ನರ್ ಅಪ್ ಆಗಿದ್ದರು.
ನಿಶಾಂತ್ ಭಟ್
ಬಿಬಿ ಒಟಿಟಿ ಫೈನಲಿಸ್ಟ್ ನಿಶಾಂತ್ ಇದೀಗ ಮತ್ತೊಮ್ಮೆ ದೊಡ್ಮನೆಗೆ ಕಾಲಿಡಲು ಸಜ್ಜಾಗಿದ್ದಾರೆ. ಸುದ್ದಿಗೋಷ್ಠಿ ವೇಳೆ ಆರತಿ ಸಿಂಗ್ ಹಾಗೂ ದೆವೋಲಿನಾ ಭಟ್ಟಾಚಾರ್ಜಿ ಈ ವಿಚಾರವನ್ನು ಕನ್ಫರ್ಮ್ ಮಾಡಿದ್ದರು. ಬಿಗ್ಬಾಸ್ ಒಟಿಟಿಯಲ್ಲಿ ಫೇಮಸ್ ಆಗಿದ್ದ ನಿಶಾಂತ್ 15ನೇ ಸೀಸನ್ನಲ್ಲಿ ಹೇಗಿರ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಪ್ರತೀಕ್ ಸೆಹಜ್ಪಾಲ್
ಬಿಗ್ಬಾಸ್ ಒಟಿಟಿ ಫಿನಾಲೆಯಲ್ಲಿ ಬಿಗ್ಬಾಸ್ ಒಟಿಟಿ ಗೆಲ್ಲುವ ಅವಕಾಶ ಕಳೆದುಕೊಂಡು ಅದರ ಬದಲಾಗಿ ಬಿಗ್ಬಾಸ್ ಸೀಸನ್ 15ಕ್ಕೆ ಪ್ರವೇಶ ಪಡೆಯೋದನ್ನು ಆಯ್ಕೆ ಮಾಡಿಕೊಂಡಿದ್ದರು. ಇವರು ಬಿಗ್ ಬಾಸ್ ಸೀಸನ್ 15ಕ್ಕೆ ಆಯ್ಕೆಯಾದ ಮೊದಲ ಸ್ಪರ್ಧಿಯಾಗಿದ್ದಾರೆ.