alex Certify ಪಿಂಚಣಿದಾರರಿಗೊಂದು ಅಪ್ಡೇಟ್…! ತುಟ್ಟಿಭತ್ಯೆ ಪರಿಹಾರ ಶೇ.13ರಷ್ಟು ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಂಚಣಿದಾರರಿಗೊಂದು ಅಪ್ಡೇಟ್…! ತುಟ್ಟಿಭತ್ಯೆ ಪರಿಹಾರ ಶೇ.13ರಷ್ಟು ಹೆಚ್ಚಳ

ಭವಿಷ್ಯ ನಿಧಿಯ ಫಲಾನುಭವಿಗಳಿಗೆ ತುಟ್ಟಿಭತ್ಯೆಯಲ್ಲಿ ಶೇ.13ರಷ್ಟು ಹೆಚ್ಚಳ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಮೇ 11ರಂದು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯಿಂದ ಹೊರಡಿಸಲಾದ ಕಛೇರಿ ಜ್ಞಾಪಕ ಪತ್ರದಲ್ಲಿ, ಫಲಾನುಭವಿಗಳಿಗೆ ಡಿಯರ್‌ನೆಸ್ ರಿಲೀಫ್‌ ಅನ್ನು ಜನವರಿ 1, 2022 ರಿಂದ ಅನ್ವಯವಾಗುವಂತೆ ಹೆಚ್ಚಿಸಲಾಗುತ್ತಿದೆ ಎಂದು ಘೋಷಿಸಲಾಗಿದೆ.

18.11.1960 ಮತ್ತು 31.12.1985 ರ ಅವಧಿಯ ನಡುವೆ ಸೇವೆಯಿಂದ ನಿವೃತ್ತರಾದ ಮತ್ತು ಎ, ಬಿ‌ ಮತ್ತು ಸಿ ಮತ್ತು ಡಿ ಗ್ರೂಪ್‌ಗೆ ಕ್ರಮವಾಗಿ ರೂ. 3,000, ರೂ. 1,000, ರೂ. 750 ಮತ್ತು ರೂ. 650 ಪರಿಹಾರಕ್ಕೆ ಅರ್ಹರಾಗಿದ್ದು, ಇದು 2013ರ ಜೂನ್ 4ರಿಂದ ಅನ್ವಯವಾಗಲಿದೆ. ಇದೀಗ 2022 ಜನವರಿಯಿಂದ ಜಾರಿಗೆ ಬರುವಂತೆ ಡಿಯರ್‌ನೆಸ್ ರಿಲೀಫ್ ಮೂಲ ಎಕ್ಸ್ ಗ್ರೇಷಿಯಾದ 368 ಪ್ರತಿಶತದಿಂದ 381 ಪ್ರತಿಶತಕ್ಕೆ ವಿಸ್ತರಣೆಯಾಗಲಿದೆ.

ಮಗುವಿನೊಂದಿಗೆ ಸರ್ಕಾರಿ ಕಚೇರಿ ಎದುರು ಆತ್ಮಹತ್ಯೆಗೆತ್ನಿಸಿದ ಮಹಿಳೆ

1 ಜನವರಿ 1986 ಕ್ಕಿಂತ ಮೊದಲು ಸೇವೆಯಿಂದ ನಿವೃತ್ತರಾಗಿದ್ದವರು ಅಥವಾ 1 ಜನವರಿ 1986 ಕ್ಕಿಂತ ಮೊದಲು ಸೇವೆಯಲ್ಲಿ ಮರಣ ಹೊಂದಿದವರ ವಿಧವೆ ಪತ್ನಿ ಮತ್ತು ಮಕ್ಕಳಿಗೆ ಪರಿಷ್ಕೃತ ಎಕ್ಸ್ ಗ್ರೇಷಿಯಾವಾಗಿ 2013 ಜೂನ್ 4ರಿಂದ ಅನ್ವಯವಾಗುವಂತೆ ಪ್ರತಿ ತಿಂಗಳು 645 ರೂಪಾಯಿಗಳಂತೆ ಪಡೆಯಲು ಅರ್ಹರು.

18 ನವೆಂಬರ್ 1969 ರ ಮೊದಲು ಸಿಪಿಎಫ್ ಪ್ರಯೋಜನಗಳ ಮೇಲೆ ನಿವೃತ್ತಿ ಹೊಂದಿದ ಕೇಂದ್ರ ಸರ್ಕಾರಿ ನೌಕರರು ರೂ. 654, ರೂ. 659, ರೂ. 703 ಮತ್ತು ರೂ. 965 ರ ಎಕ್ಸ್-ಗ್ರೇಷಿಯಾ ಪಾವತಿಯನ್ನು ಸ್ವೀಕರಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...