ಇಷ್ಟುದಿನ ವಿದೇಶಗಳಲ್ಲಿ ಕಂಡುಬರ್ತಿದ್ದ ಬ್ಲಾಕ್ ಎಂಡಿಎಂಎ ಡ್ರಗ್ ಕರ್ನಾಟಕದ ರಾಜಧಾನಿಗು ಎಂಟ್ರಿ ಕೊಟ್ಟಿದೆ. ಜಗತ್ತಿನಲ್ಲೆ ಟಾಪ್ ಎಂಡ್ ಡ್ರಗ್ ಲಿಸ್ಟ್ ನಲ್ಲಿ ಅಗ್ರಸ್ಥಾನ ಪಡೆದ್ಕೊಂಡಿರೊ ಬ್ಲಾಕ್ ಎಂಡಿಎಂಎ ಇಷ್ಟುದಿನ ಕರ್ನಾಟಕದಲ್ಲೆಲ್ಲು ಪತ್ತೆಯಾಗಿರಲಿಲ್ಲ. ಇದೇ ಮೊದಲ ಪ್ರಕರಣ.
ಹೆಚ್ಚು ಬೆಲೆ ಇರುವ ಈ ಡ್ರಗ್ ಅನ್ನು ಸಾಮಾನ್ಯವಾಗಿ ಹೈ ಎಂಡ್ ಪಾರ್ಟಿಗಳಲ್ಲಿ ಸೀಜ್ ಮಾಡಲಾಗ್ತಿತ್ತು. ಅಂತಾ ಘಟನೆ ಇದುವರೆಗು ಕರ್ನಾಟಕದಲ್ಲಿ ನಡೆದಿರಲಿಲ್ಲ. ವಿದೇಶಗಳಲ್ಲಿ ಹೆಚ್ಚು ಕಂಡುಬರುವ ಈ ಡ್ರಗ್ ಅನ್ನು ಈಗ ಬೆಂಗಳೂರು ಪೊಲೀಸರು ಸೀಜ಼್ ಮಾಡಿದ್ದಾರೆ. ಹೈ ಎಂಡ್ ಪಾರ್ಟಿಗಳು ಮತ್ತು ಸೆಲೆಬ್ರಿಟಿಗಳಿಗೆ ಸಪ್ಲೈ ಮಾಡಲು ನೈಜಿರೀಯ ಮೂಲದ ಡ್ರಗ್ ಪೆಡ್ಲರ್ಗಳು ತರಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಮಾಲ್ ಸಮೇತ ಇಬ್ಬರನ್ನ ಬಂಧಿಸಿದ್ದೇವೆ ಎಂದು ಗೋವಿಂದಪುರ ಪೊಲೀಸರು ಮಾಹಿತಿ ನೀಡಿದ್ದಾರೆ.
ನೈಜೀರಿಯ ಮೂಲದ ಸಿಕ್ಸ್ಟಸ್ ಉಕ್ಚೆಕ್ ಮತ್ತು ಚುಕ್ವಾಡ್ಬೆಮ್ ಬಂಧಿತ ಆರೋಪಿಗಳು. ಬಂಧಿತರಿಂದ 3 ಕೋಟಿ ಮೌಲ್ಯದ 1.5 ಕೆಜಿ ಎಂಡಿಎಂಎ ಕ್ರಿಸ್ಟಲ್, 120 ಗ್ರಾಂ ಬ್ಲಾಕ್ ಎಂಡಿಎಂಎ , 16.5 ಕೆಜಿ ಎಂಡಿಎಂಎ ಮಿಕ್ಸ್ಡ್ ವೀಡ್ ಆಯಿಲ್, 300 ಗ್ರಾಂ ವೀಡ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರು ವಿದೇಶದಿಂದ ಡ್ರಗ್ಸ್ ತರಿಸಿಕೊಂಡು, ಸೆಲೆಬ್ರಿಟಿಗಳು, ಉದ್ಯಮಿಗಳು , ಕಾಲೇಜು ವಿದ್ಯಾರ್ಥಿಗಳಿಗೆ ಸಪ್ಲೈ ಮಾಡ್ತಿದ್ದರು ಎಂದು ಗೋವಿಂದಪುರ ಪೊಲೀಸರು ಮಾಹಿತಿ ನೀಡಿದ್ದಾರೆ.