alex Certify BIG NEWS : ರಾಜ್ಯದ ಜನತೆಗೆ ಬಿಗ್ ಶಾಕ್ : ಶೀಘ್ರದಲ್ಲೇ ನಂದಿನಿ ಹಾಲು, ಮೊಸರಿನ ದರ 5 ರೂ. ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯದ ಜನತೆಗೆ ಬಿಗ್ ಶಾಕ್ : ಶೀಘ್ರದಲ್ಲೇ ನಂದಿನಿ ಹಾಲು, ಮೊಸರಿನ ದರ 5 ರೂ. ಹೆಚ್ಚಳ

ಬೆಂಗಳೂರು : ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು, ಶೀಘ್ರದಲ್ಲೇ ನಂದಿನಿ ಹಾಲು, ಮೊಸರಿನ ದರ ಲೀ.ಗೆ 5 ರೂ ಹೆಚ್ಚಳವಾಗುವ ಸಾಧ್ಯತೆ ಇದೆ.

ಈ ಬಗ್ಗೆ ಕೆಎಂಎಫ್ ನೂತನ ಅಧ್ಯಕ್ಷ ಭೀಮಾನಾಯ್ಕ್ ಸುಳಿವು ನೀಡಿದ್ದಾರೆ. ಹಾಲಿನ ದರ ಹೆಚ್ಚಳಕ್ಕೆ ಒಕ್ಕೂಟಗಳು ಮನವಿ ಮಾಡಿದ್ದು, ನಂದಿನಿ ಹಾಲು, ಮೊಸರಿನ ದರ ಲೀಟರ್ ಗೆ 5. ರೂ ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದೆ. ಬಜೆಟ್ ಅಧಿವೇಶನದ ಬಳಿಕ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.ಉತ್ತಮ ಗುಣಮಟ್ಟದ ನಂದಿನಿ ತುಪ್ಪ ನೀಡಲಾಗುತ್ತದೆ. ರಾಜ್ಯದ ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳು ನಂದಿನಿ ಹಾಲಿನ ದರವನ್ನು ಲೀಟರ್ಗೆ 5 ರೂ. ಹೆಚ್ಚಿಸುವಂತೆ ಹಿಂದೆಯೇ ಬೇಡಿಕೆ ಇಟ್ಟಿವೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ” ಎಂದರು.

ದರ ಹೆಚ್ಚಿಸುವುದಲ್ಲದೆ ಗ್ರಾಹಕರಿಗೆ ಗುಣಮಟ್ಟದ ಹಾಲು, ಮೊಸರು, ತುಪ್ಪ ಒದಗಿಸಲು ಆದ್ಯತೆ ನೀಡುತ್ತೇವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹಾಲಿನ ದರ ಹೆಚ್ಚಳಕ್ಕೆ ವಿವಿಧ ಹಾಲು ಒಕ್ಕೂಟಗಳಿಂದ ಕೆಎಂಎಫ್ ಮೇಲೆ ತೀವ್ರ ಒತ್ತಡವಿದ್ದು, ಈ ಹಿನ್ನೆಲೆ ಸರ್ಕಾರ ಹಾಲಿನ ದರ ಹೆಚ್ಚಳಕ್ಕೆ ನಿರ್ಧರಿಸಿದೆ ಎನ್ನಲಾಗಿದೆ. ಈ ಮೂಲಕ ಗ್ರಾಹಕರಿಗೆ ಹಾಲಿನ ದರ ಏರಿಕೆಯ ಬಿಸಿ ತಟ್ಟಲಿದೆ.

‘KMF’ ಜೊತೆ ‘ಅಮುಲ್’ ವಿಲೀನ ಇಲ್ಲ : ಸಚಿವ ಕೆ. ಎನ್ ರಾಜಣ್ಣ ಸ್ಪಷ್ಟನೆ

ಬೆಂಗಳೂರು : ಕೆಎಂಎಫ್ ಜೊತೆ ಅಮುಲ್ ವಿಲೀನ ಇಲ್ಲಎಂದು ಸಹಕಾರ ಸಚಿವ ಕೆ. ಎನ್ ರಾಜಣ್ಣ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಕೆ ಎನ್ ರಾಜಣ್ಣ ಕೆಎಂಎಫ್ ಜೊತೆ ಅಮುಲ್ ವಿಲೀನ ಎಂಬ ಸುದ್ದಿ ಹರಿದಾಡುತ್ತಿದೆ. ಯಾವುದೇ ಕಾರಣಕ್ಕೂ ಕೆಎಂಎಫ್ ಜೊತೆ ಅಮುಲ್ ವಿಲೀನ ಮಾಡಲ್ಲ ಎಂದು ಸಚಿವ ಕೆ. ಎನ್ ರಾಜಣ್ಣ ಹೇಳಿದ್ದಾರೆ. ಗುಜರಾತ್ನ ಅಮುಲ್ ಜೊತೆ ಕೆಎಂಎಫ್ ವಿಲೀನ ಎಂಬ ವಿಚಾರ ಇತ್ತೀಚೆಗೆ ಹರಿದಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಯಾರಿಗೂ ತಪ್ಪು ಕಲ್ಪನೆ ಬೇಡ, ಕೆಲವರು ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕೆಎಂಎಫ್ ಜೊತೆ ಅಮುಲ್ ವಿಲೀನ ಮಾಡಲ್ಲ ಎಂದು ಸಚಿವ ಕೆ. ಎನ್ ರಾಜಣ್ಣ ಹೇಳಿದ್ದಾರೆ.ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಧ್ಯಕ್ಷ ಸ್ಥಾನಕ್ಕೆ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಾನಾಯ್ಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕರ್ನಾಟಕ ಹಾಲು ಮಾರಾಟ ಮಹಾಮಂಡಳಿ (KMF) ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ಕಾಂಗ್ರೆಸ್ ನ ಶಾಸಕ ಭೀಮಾ ನಾಯ್ಕ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಬಾಲಚಂದ್ರ ಜಾರಕಿಹೊಳಿ ಅವರ ತೆರವಾದ ಅಧ್ಯಕ್ಷ ಸ್ಥಾನಕ್ಕೆ , ಕಾಂಗ್ರೆಸ್ನ ಶಾಸಕ ಭೀಮಾ ನಾಯ್ಕ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ನಾಮಪತ್ರ ಸಲ್ಲಿಕೆ ಅವಧಿ ಮುಗಿದರೂ ಭೀಮಾನಾಯ್ಕ್ಗೆ ವಿರೋಧವಾಗಿ ಯಾರೊಬ್ಬರೂ ನಾಮಪತ್ರ ಸಲ್ಲಿಕೆ ಮಾಡಿಲ್ಲ. ಹೀಗಾಗಿ, ಭೀಮಾನಾಯ್ಕ್ ಅವಿರೋಧವಾಗಿ ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...