alex Certify ನಾಲ್ಕು ರೀತಿಯ ʼಆಧಾರ್‌ʼ ಸಾಕ್ಷ್ಯಗಳಿಗೆ ಯುಐಎಡಿಐ ಸಿಂಧುತ್ವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಲ್ಕು ರೀತಿಯ ʼಆಧಾರ್‌ʼ ಸಾಕ್ಷ್ಯಗಳಿಗೆ ಯುಐಎಡಿಐ ಸಿಂಧುತ್ವ

ಆಧಾರ್‌ ಕಾರ್ಡ್‌ದಾರರಿಗೆ ದಿನೇ ದಿನೇ ಹೊಸ ಸವಲತ್ತುಗಳನ್ನು ಕೊಡುತ್ತಾ ಬಂದಿರುವ ಯುಐಎಡಿಐ, ಇದೀಗ ಇ-ಆಧಾರ್‌ ಹಾಗೂ ಎಂ-ಆಧಾರ್‌ಗಳನ್ನು ಗುರುತಿನ ಸಾಕ್ಷ್ಯವಾಗಿ ತೋರಿಸಲು ಅನುಮತಿ ಕೊಟ್ಟಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಯುಐಎಡಿಐ, “ನೀವು ಈಗ ನಿಮ್ಮ ಅನುಕೂಲಕ್ಕೆ ತಕ್ಕಂತೆ ವಿವಿಧ ರೀತಿಯ ಆಧಾರ್‌ಗಳನ್ನು ಬಳಸಬಹುದಾಗಿದೆ. ಈ ನಾಲ್ಕು ರೀತಿಯ ಆಧಾರ್‌ಗಳು — ಆಧಾರ್‌ ಪತ್ರ, ಇಆಧಾರ್‌, ಎಂಆಧಾರ್‌ ಮತ್ತು ಆಧಾರ್‌ ಪಿವಿಸಿ ಕಾರ್ಡ್. ಈ ಎಲ್ಲಾ ರೀತಿಯ ಆಧಾರ್‌ಗಳು ಸಮಾನವಾಗಿ ಸಿಂಧುವಾಗಿದ್ದು, ಎಲ್ಲೆಡೆ ಒಪ್ಪಿತವಾಗಿವೆ,” ಎಂದು ತಿಳಿಸಿದೆ.

ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಆದ ಎಂಆಧಾರ್‌ ನಿಮಗೆ 35ಕ್ಕೂ ಹೆಚ್ಚು ಆಧಾರ್‌ ಸೇವೆಗಳನ್ನು ಒದಗಿಸಬಲ್ಲದಾಗಿದೆ. ಈ ಅಪ್ಲಿಕೇಶನ್‌ಅನ್ನು ಭಾರತದ ಯಾವುದೇ ಜಾಗದಲ್ಲಿ ಬೇಕಾದರೂ ಯಾವಾಗ ಬೇಕಾದರೂ ಬಳಸಬಹುದಾಗಿದೆ.

ಕರಗಳಿಗಿರಲಿ ‘ಬಳೆ’ಗಳ ಕಳೆ

ಆಧಾರ್‌ ಪಿವಿಸಿ ಕಾರ್ಡ್‌ಅನ್ನು ಸುಲಭವಾಗಿ ಕೊಂಡೊಯ್ಯಬಲ್ಲದಾಗಿದೆಯಲ್ಲದೇ, ಇದರಲ್ಲಿ ಡಿಜಿಟಲ್ ಸಹಿ ಇರುವ ಕ್ಯೂಆರ್‌ ಕೋಡ್ ಸಹ ಇರುತ್ತದೆ. uidai.gov.in ಅಥವಾ resident.uidai.gov.in ವಿಳಾಸಕ್ಕೆ ಭೇಟಿ ಕೊಟ್ಟು, ಆನ್ಲೈನ್‌ನಲ್ಲಿ ಈ ಕಾರ್ಡ್‌ಅನ್ನು ಆರ್ಡರ್‌ ಮಾಡಬಹುದಾಗಿದೆ.

ಎಲೆಕ್ಟ್ರಾನಿಕ್ ಮಾದರಿಯ ಆಧಾರ್‌ ಕಾರ್ಡ್ ಆಗಿರುವ ಇ-ಆಧಾರ್‌ಅನ್ನು ಎಲ್ಲ ರೀತಿಯ ಪರಿಶೀಲನೆಗಳಿಗೆ ನೀಡಬಹುದಾಗಿದೆ.

ಅಂಚೆ ಮೂಲಕ ಡೆಲಿವರಿ ಆಗುವ ಆಧಾರ್‌ ಪತ್ರವನ್ನು ಪಡೆಯಲು 90 ದಿನಗಳು ಬೇಕಾಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...