alex Certify BIG NEWS : ಫೆಬ್ರವರಿ 1ರಿಂದ ʻಇ-ಆಫೀಸ್ʼ ಬಳಕೆ ಕಡ್ಡಾಯ : ರಾಜ್ಯ ಸರ್ಕಾರ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಫೆಬ್ರವರಿ 1ರಿಂದ ʻಇ-ಆಫೀಸ್ʼ ಬಳಕೆ ಕಡ್ಡಾಯ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಕಂದಾಯ ಇಲಾಖೆಯ ಎಲ್ಲ ಹಂತದ ಕಚೇರಿಗಳಲ್ಲಿ ಫೆಬ್ರವರಿ 1 ರಿಂದ ಇ-ಆಫೀಸ್‌ ತಂತ್ರಾಂಶದ ಮೂಲಕವೇ ಕಡತ ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವರು, ಕಂದಾಯ ಇಲಾಖೆಯ ಎಲ್ಲ ಹಂತದ ಕಚೇರಿಗಳಲ್ಲಿ ಫೆಬ್ರವರಿ 1 ರಿಂದ ಇ-ಆಫೀಸ್‌ ತಂತ್ರಾಂಶದ ಮೂಲಕವೇ ಕಡತ ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು. ಭೌತಿಕ ಕಡತಗಳ ನಿರ್ವಹಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. ಟಪಾಲುಗಳ ಸ್ವೀಕಾರ ಮತ್ತು ಮುಂದಿನ ಪ್ರಕ್ರಿಯೆಯೂ ಇ-ಆಫೀಸ್‌ ಮೂಲಕವೇ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇ- ಆಫೀಸ್‌ ತಂತ್ರಾಂಶ ಬಳಕೆ ಮಾಡದೇ, ಭೌತಿಕ ಕಡತಗಳನ್ನು ತೆರೆಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇ- ಆಫೀಸ್‌ ತಂತ್ರಾಂಶ ಕುರಿತು ನಿಯಮಿತವಾಗಿ ವರದಿ ಸಲ್ಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಭೌತಿಕ ಕಡತ ನಿರ್ವಹಣೆ ಮಾಡಿದವರಿಗೆ ನೋಟಿಸ್‌ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...