alex Certify BIG NEWS: US ಉದ್ಯೋಗ ಡೇಟಾದಿಂದ ಮಾರುಕಟ್ಟೆ ಮೇಲೆ ಒತ್ತಡ; ಆದರೂ ವಾರಾಂತ್ಯಕ್ಕೆ ಸ್ಥಿರತೆ ಕಾಯ್ದುಕೊಂಡಿವೆ ಸೆನ್ಸೆಕ್ಸ್‌, ನಿಫ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: US ಉದ್ಯೋಗ ಡೇಟಾದಿಂದ ಮಾರುಕಟ್ಟೆ ಮೇಲೆ ಒತ್ತಡ; ಆದರೂ ವಾರಾಂತ್ಯಕ್ಕೆ ಸ್ಥಿರತೆ ಕಾಯ್ದುಕೊಂಡಿವೆ ಸೆನ್ಸೆಕ್ಸ್‌, ನಿಫ್ಟಿ

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ದಿನದ ವಹಿವಾಟು ಅಂತ್ಯಕ್ಕೆ ಸ್ಥಿರತೆ ಕಾಯ್ದುಕೊಂಡಿವೆ. ಸೆನ್ಸೆಕ್ಸ್ 37 ಅಂಕಗಳ ಏರಿಕೆಯೊಂದಿಗೆ 58,803.33ರಲ್ಲಿ ಅಂತ್ಯವಾಗಿದೆ. ನಿಫ್ಟಿ 50.3 ಅಂಕಗಳ ನಷ್ಟದೊಂದಿಗೆ 17,539.45ರಲ್ಲಿ ಕೊನೆಗೊಂಡಿತು.

ITC, HDFC ಮತ್ತು Larsen & Toubro ಷೇರುಗಳು ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಅತ್ಯಧಿಕ ಲಾಭ ಗಳಿಸಿವೆ. ಮಾರುತಿ ಸುಜುಕಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು ಹಿನ್ನಡೆ ಅನುಭವಿಸಿವೆ.

ವಲಯವಾರು ಸೂಚ್ಯಂಕಗಳಲ್ಲಿ, ಬಿಎಸ್‌ಇ ಕ್ಯಾಪಿಟಲ್ ಗೂಡ್ಸ್ ಶೇ.1ಕ್ಕಿಂತ ಹೆಚ್ಚು ಏರಿಕೆ ಕಂಡಿದ್ದು, ತೈಲ, ಅನಿಲ, ಲೋಹ ಮತ್ತು ಶಕ್ತಿ ಸೂಚ್ಯಂಕಗಳು ಶೇ.1ರಷ್ಟು ಕುಸಿದಿವೆ. ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ಆದರೆ ಬ್ಯಾರೆಲ್‌ಗೆ 95 ಡಾಲರ್‌ ಗಡಿಯನ್ನು ದಾಟಿಲ್ಲ. ಭಾರತೀಯ ರೂಪಾಯಿ 25 ಪೈಸೆ ಕುಸಿದು ಪ್ರತಿ ಡಾಲರ್‌ಗೆ 79.80 ಕ್ಕೆ ತಲುಪಿದೆ.

ಅಮೆರಿಕದ ಉದ್ಯೋಗ ಡೇಟಾ ಬಿಡುಗಡೆಗೂ ಮುನ್ನ ಜಾಗತಿಕ ಮಾರುಕಟ್ಟೆ ಒತ್ತಡದಲ್ಲಿತ್ತು. ತೈಲ ಬೆಲೆಗಳು ಉತ್ಪಾದನೆಯಲ್ಲಿ ಕಡಿತದ ನಿರೀಕ್ಷೆಯ ಮೇಲೆ OPEC + ಸಭೆಗೆ ಮುಂಚಿತವಾಗಿಯೇ ಏರಿತು. ಏರುತ್ತಿರುವ ಡಾಲರ್ ಸೂಚ್ಯಂಕ ದೇಶೀಯ ಮಾರುಕಟ್ಟೆಯಲ್ಲಿ ಚಂಚಲತೆ ಸೃಷ್ಟಿಸಬಹುದು. ಸೆನ್ಸೆಕ್ಸ್ ಮತ್ತು ನಿಫ್ಟಿ ವಾರಾಂತ್ಯದಲ್ಲಿ ಸ್ಥಿರತೆ ಕಾಯ್ದುಕೊಂಡಿವೆ.

US ಫೆಡ್ ತನ್ನ ಸೆಪ್ಟೆಂಬರ್ ಸಭೆಯಲ್ಲಿ ಆಕ್ರಮಣಕಾರಿಯಾಗಿ ದರಗಳನ್ನು ಹೆಚ್ಚಿಸುವುದು ಬಹುತೇಕ ಖಚಿತವಾಗಿದೆ. ತೀಕ್ಷ್ಣವಾದ ದರ ಹೆಚ್ಚಳ, ಆರ್ಥಿಕ ಹಿಂಜರಿತ ಕೂಡ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...