alex Certify BIG NEWS : ʻಹಾವು ಕಡಿತ ಅಧಿಸೂಚಿತ ಕಾಯಿಲೆʼ : ರಾಜ್ಯ ಸರ್ಕಾರ‌ ಮಹತ್ವದ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ʻಹಾವು ಕಡಿತ ಅಧಿಸೂಚಿತ ಕಾಯಿಲೆʼ : ರಾಜ್ಯ ಸರ್ಕಾರ‌ ಮಹತ್ವದ ಘೋಷಣೆ

ಬೆಂಗಳೂರು : ರಾಜ್ಯ ಸರ್ಕಾರವು (Government of Karnataka) ಹಾವು ಕಡಿತವನ್ನು ಅಧಿಸೂಚಿತ ಕಾಯಿಲೆ ಎಂದು ಅಧಿಕೃತವಾಗಿ ಘೋಷಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರವು, ಭಾರತದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ನಿರ್ಲಕ್ಷಿತ ಉಷ್ಣವಲಯದ ರೋಗಗಳು (Neglected Tropical Diseases) ಎಂದು ವರ್ಗಿಕರಿಸಲಾಗಿದೆ. ಇದರ ನಿಯಂತ್ರಣದ ಅಂಗವಾಗಿ ಹಾವು ಕಡಿತ ತಡೆಗಟ್ಟುವಿಕೆ ನಿಯಂತ್ರಣ ಆರಂಭಿಸಲಾಗಿದ್ದು ಕರ್ನಾಟಕದಲ್ಲಿ 2023-24 ರಿಂದ ಜಾರಿಗೊಳಿಸಲಾಗಿದೆ.

ರಾಜ್ಯದಲ್ಲಿ ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು, ಮನುಷ್ಯರಲ್ಲಿ ಉಂಟಾಗುವ ಹಾವು ಕಡಿತ ಮತ್ತು ಮರಣ ಪ್ರಕರಣಗಳನ್ನು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯಿದೆ 2020. ಸೆಕ್ಷನ್ 3 ರನ್ವಯ ಹಾವು ಕಡಿತ ಮರಣವನ್ನು “Notifiable disease ಎಂದು ಘೋಷಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು/ಖಾಸಗಿ ಆಸ್ಪತ್ರೆಗಳು ಹಾಗೂ ರಾಜ್ಯದ ಎಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಕಡ್ಡಾಯವಾಗಿ, ಹಾವುಗಳ ಕಡಿತ ಚಿಕಿತ್ಸೆಗೆ ಒಳ ಮತ್ತು ಹೊರ ರೋಗಿಯಾಗಿ ಹಾಗೂ ಮರಣ ಉಂಟಾಗುವ ಪ್ರಕರಣಗಳ ಮಾಹಿತಿ/ವಿವರಗಳನ್ನು ಭಾರತ ಸರ್ಕಾರದ Integrated Health Information Platform (IHIP) ನಲ್ಲಿ ದಾಖಲಿಸುವಂತೆ ತಿಳಿಸಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...