alex Certify BIG NEWS: RTI ಮೂಲಕ ಪುನರಾವರ್ತಿತ ಪ್ರಶ್ನೆ ಕೇಳಿ ಕಿರುಕುಳ; 9 ಮಂದಿಗೆ ‘ಬ್ಲಾಕ್ ಲಿಸ್ಟ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: RTI ಮೂಲಕ ಪುನರಾವರ್ತಿತ ಪ್ರಶ್ನೆ ಕೇಳಿ ಕಿರುಕುಳ; 9 ಮಂದಿಗೆ ‘ಬ್ಲಾಕ್ ಲಿಸ್ಟ್’

ಜನಸಾಮಾನ್ಯರಿಗೂ ಸಹ ಸರ್ಕಾರಿ ಕಚೇರಿಗಳ ಕಾರ್ಯ ನಿರ್ವಹಣೆ ಕುರಿತು ಅರಿವು ಇರಲಿ ಎಂಬ ಕಾರಣಕ್ಕಾಗಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆದರೆ ಕೆಲವರು ಇದನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಇಂಥವುದೇ ಒಂದು ಪ್ರಕರಣದಲ್ಲಿ 9 ಮಂದಿ ಮಾಹಿತಿ ಹಕ್ಕು ಕಾಯ್ದೆ ಅಡಿ ಪುನರಾವರ್ತಿತ ಪ್ರಶ್ನೆಗಳನ್ನು ಕೇಳಿ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದ್ದು ಹೀಗಾಗಿ ಇವರುಗಳನ್ನು ಗುಜರಾತ್ ಮಾಹಿತಿ ಆಯೋಗವು ಕಪ್ಪು ಪಟ್ಟಿಗೆ ಸೇರಿಸಿದೆ. ಅಲ್ಲದೆ ಇವರು ಕೇಳುವ ಅರ್ಜಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಬಾರದು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ಆದರೆ ಗುಜರಾತ್ ಮಾಹಿತಿ ಆಯೋಗದ ಈ ಕ್ರಮಕ್ಕೆ ಕೇಂದ್ರ ಮಾಹಿತಿ ಆಯೋಗ ವ್ಯತಿರಿಕ್ತ ಅಭಿಪ್ರಾಯ ನೀಡಿದ್ದು, ಈ ರೀತಿ ಜೀವಮಾನವಿಡಿ ನಿಬಂಧನೆ ಹೇರುವ ಯಾವುದೇ ನಿಯಮ ಅಸ್ತಿತ್ವದಲ್ಲಿಲ್ಲ ಎಂದು ತಿಳಿಸಿದೆ. ಸರ್ಕಾರೇತರ ಸಂಸ್ಥೆಯೊಂದು ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಿದ ಪ್ರಶ್ನೆಗೆ ಈ ಉತ್ತರ ಸಿಕ್ಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...