BIG NEWS: RSS ಮಾಹಿತಿಯನ್ನು SDPI ಕಾರ್ಯಕರ್ತರಿಗೆ ಸೋರಿಕೆ ಮಾಡಿದ್ದ ಪೊಲೀಸ್ ಅಧಿಕಾರಿ ಸಸ್ಪೆಂಡ್ 29-12-2021 4:09PM IST / No Comments / Posted In: Latest News, India, Live News ಎಸ್‌ಡಿಪಿಐ ಕಾರ್ಯಕರ್ತರಿಗೆ ಆರ್‌ಎಸ್‌ಎಸ್ ಕಾರ್ಯಕರ್ತರ ಖಾಸಗಿ ಮಾಹಿತಿಗಳನ್ನು ಸೋರಿಕೆ ಮಾಡಿದ್ದ ಕೇರಳದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಕರಿಮನ್ನೂರು ಪೊಲೀಸ್ ಠಾಣೆಯ ಸಿಪಿಓ ಪಿಕೆ ಅನಸ್ರನ್ನು ಆಂತರಿಕ ತನಿಖೆಗೆ ಒಳಪಡಿಸಿದ ಪೊಲೀಸರು ಪ್ರೈವೇಟ್ ಚಾಟ್ ಗ್ರೂಪ್ಗಳಿಗೆ ಪೊಲೀಸ್ ಡೇಟಾ ಬೇಸ್ನಲ್ಲಿದ್ದ ಮಾಹಿತಿಗಳನ್ನು ಸೋರಿಕೆ ಮಾಡಿರೋದು ಸಾಬೀತಾದ ಹಿನ್ನೆಲೆಯಲ್ಲಿ ಅನಸ್ರನ್ನು ಅಮಾನತುಗೊಳಿಸಲಾಗಿದೆ. ಸಿಪಿಓ ಅನಸ್ರನ್ನು ಇಡುಕ್ಕಿ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಇದು ದೀರ್ಘ ತನಿಖೆಯ ಬಳಿಕ ಅಮಾನತುಗೊಳಿಸಿ ಆದೇಶ ನೀಡಲಾಗಿದೆ. ಇಡುಕ್ಕಿ ಜಿಲ್ಲೆಯ ತೊಡುಪುಳದಲ್ಲಿ ಮಧುಸೂಧನ್ ಎಂಬ ಬಸ್ ಕಂಡಕ್ಟರ್ ಮೇಲೆ 6 ಮಂದಿ ಹಲ್ಲೆ ನಡೆಸಿದ ಪ್ರಕರಣದಲ್ಲಿ SDPI ಕಾರ್ಯಕರ್ತರನ್ನು ಡಿಸೆಂಬರ್ 2 ರಂದು ಬಂಧಿಸಲಾಗಿತ್ತು. ಫೇಸ್ಬುಕ್ನಲ್ಲಿ ಕೋಮುವಾದವನ್ನು ಪ್ರಚೋದಿಸುವಂತಹ ಪೋಸ್ಟ್ ಶೇರ್ ಮಾಡಿದ್ದಾರೆ ಎಂದು ಆರೋಪಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ನಡುವೆ, ಪಾಲಕ್ಕಾಡ್ ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆಯ ತನಿಖೆ ನಡೆಸುತ್ತಿರುವ ಕೇರಳ ಪೊಲೀಸರು ಪ್ರಕರಣ ಸಂಬಂಧ ಚೆರ್ಪುಳಸ್ಸೆರಿ ಪ್ರದೇಶದ ಎಸ್‌ಡಿಪಿಐ ಕಾರ್ಯಕರ್ತನನ್ನು ಇಂದು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಕೊಲೆಯ ಪ್ರಮುಖ ಆರೋಪಿಯಾಗಿದ್ದಾನೆ. ಆತ ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಕತ್ತಿಯಿಂದ ಇರಿದಿದ್ದಾನೆ. ಬಂಧಿತ ಆರೋಪಿ ಒಬ್ಬ ಎಸ್‌ಡಿಪಿಐ ಕಾರ್ಯಕರ್ತನಾಗಿದ್ದಾನೆ ಎಂದು ಎಸ್ಪಿ ಆರ್. ವಿಶ್ವನಾಥ್ ಹೇಳಿದ್ದಾರೆ.