alex Certify BIG NEWS: RSS ಬಗ್ಗೆ ನೆಹರು, ಇಂದಿರಾಗಾಂಧಿ ಮಾತನಾಡುವಾಗಲೇ ಹಚಾ…ಅನ್ಕೊಂಡು ಹೋದ್ವಿ; ಇನ್ನು HDK, ಸಿದ್ದರಾಮಯ್ಯ ನಮಗ್ಯಾವ ಲೆಕ್ಕ…..?; ಸಚಿವ ಈಶ್ವರಪ್ಪ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: RSS ಬಗ್ಗೆ ನೆಹರು, ಇಂದಿರಾಗಾಂಧಿ ಮಾತನಾಡುವಾಗಲೇ ಹಚಾ…ಅನ್ಕೊಂಡು ಹೋದ್ವಿ; ಇನ್ನು HDK, ಸಿದ್ದರಾಮಯ್ಯ ನಮಗ್ಯಾವ ಲೆಕ್ಕ…..?; ಸಚಿವ ಈಶ್ವರಪ್ಪ ವಾಗ್ದಾಳಿ

ಬಾಗಲಕೋಟೆ: ದೇಶದ ಯುವಕರಲ್ಲಿ ರಾಷ್ಟ್ರಭಕ್ತಿಯನ್ನು ತುಂಬುವ ಶಕ್ತಿ ಆರ್.ಎಸ್.ಎಸ್. ಒಂದು ವೇಳೆ ಆರ್.ಎಸ್.ಎಸ್. ಇಲ್ಲದಿದ್ದರೆ ಈ ದೇಶ ಪಾಕಿಸ್ತಾನವಾಗಿಬಿಡುತ್ತಿತ್ತು ಎಂಬುದು ನೆನಪಿರಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಿಎಂ ಗಳಾದ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇಬ್ಬರೂ ಮುಸ್ಲೀಂ, ಕ್ರಿಶ್ಚಿಯನ್ ಮತಗಳ ಮೇಲೆ ಕಣ್ಣಿಟ್ಟು ಆರ್.ಎಸ್.ಎಸ್. ಬೈಯ್ಯುತ್ತಿದ್ದಾರೆ. ಆರ್.ಎಸ್.ಎಸ್. ಬೈದರೆ ತಮಗೆ ಮತ ಹಾಕುತ್ತಾರೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್, ಜೆಡಿಎಸ್ ನವರಿದ್ದಾರೆ ಎಂದು ಕಿಡಿಕಾರಿದರು.

ಸತ್ತವರ ಹೆಸರಲ್ಲಿ ವಿಮೆ ಮಾಡಿ ಕಳ್ಳಾಟವಾಡಿದ್ದ ಎಲ್​ಐಸಿ ಏಜೆಂಟ್​ ಅರೆಸ್ಟ್

ದಲಿತರು, ಹಿಂದುಳಿದವರು ಈಗ ಬಿಜೆಪಿ ಜೊತೆ ಬಂದಾಯಿತು. ರಾಷ್ಟ್ರಭಕ್ತ ಮುಸ್ಲೀಂರು ಬಿಜೆಪಿಯಲ್ಲಿಯೇ ಇದ್ದಾರೆ. ಉಳಿದ ಮುಸ್ಲೀಂರೂ ನಮ್ಮ ಜೊತೆ ಬರುತ್ತಾರೆ ಹಾಗಾಗಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಆರ್.ಎಸ್.ಎಸ್. ಬೈಯ್ಯುವ ಮೂಲಕ ಮುಸ್ಲೀಂ ಹಾಗೂ ಕ್ರಿಶ್ಚಿಯನ್ ಮತಗಳನ್ನು ಸೆಳೆಯಲು ಮುಂದಾಗಿದ್ದಾರೆ. ಆರ್.ಎಸ್.ಎಸ್. ಬಗ್ಗೆ ನೆಹರು, ಇಂದಿರಾಗಾಂಧಿ ಮಾತನಾಡಿದಾಗಲೇ ಹಚಾ…ಅನ್ಕೊಂಡು ಹೋದ್ವಿ, ಇನ್ನು ಇವರ್ಯಾರ್ರಿ ನಮ್ಮ ಲೆಕ್ಕಕ್ಕೆ? ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...