ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ ತಿಂಗಳಿನಲ್ಲಿ ಬರೋಬ್ಬರಿ 812 ಟನ್ ಚಿನ್ನ ಖರೀದಿಸಿರುವುದು ಬಹಿರಂಗವಾಗಿದೆ. ಇದಕ್ಕಾಗಿ ಸುಮಾರು 5,600 ಕೋಟಿ ರೂಪಾಯಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ವ್ಯಯಿಸಿದೆ.
ಜಾಗತಿಕ ಆರ್ಥಿಕ ಏರಿಳಿತಗಳ ನಡುವೆಯೂ ಭಾರತೀಯ ರಿಸರ್ವ್ ಬ್ಯಾಂಕ್, ತನ್ನ ಚಿನ್ನ ಸಂಗ್ರಹ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದು, ಈಗ ಆರ್‌ಬಿಐ ಬಳಿ ಒಟ್ಟು ಚಿನ್ನ ಮೀಸಲಿನ ಪ್ರಮಾಣ 812 ಟನ್ ಗೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.
ಯಾವುದೇ ದೇಶದ ಚಿನ್ನ ಸಂಗ್ರಹದ ಪ್ರಮಾಣವು ಆ ದೇಶದ ಆರ್ಥಿಕ ಶಕ್ತಿಯನ್ನು ಬಿಂಬಿಸಲಿದ್ದು, ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಚಿನ್ನ ಮೀಸಲು ಪ್ರಮಾಣವನ್ನು ಏರಿಕೆ ಮಾಡಿಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ. ಪ್ರಸ್ತುತ ಅಮೆರಿಕ ಕೇಂದ್ರೀಯ ಬ್ಯಾಂಕ್ 8133 ಟನ್ ಚಿನ್ನ ಸಂಗ್ರಹದೊಂದಿಗೆ ಅತಿ ಹೆಚ್ಚು ಚಿನ್ನ ಸಂಗ್ರಹ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ.