ರಾಮನಗರ: ರಾಯಣ್ಣ ಪ್ರತಿಮೆ ಧ್ವಂಸ, ಎಂಇಎಸ್ ಪುಂಡಾಟ ಮೇರೆ ಮೀರುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮೀತಿ-ಎಂಇಎಸ್ ನ್ನು ನಿಷೇಧಿಸಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ವಸತಿ ಸಚಿವ ವಿ.ಸೋಮಣ್ಣ ನಿಷೇಧದ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿರುವುದು ಕನ್ನಡ ಪರ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದೆ.
ರಾಮನಗರದಲ್ಲಿ ಮಾತನಾಡಿದ ಸಚಿವ ಸೋಮಣ್ಣ, ಎಂಇಎಸ್ ನಿಷೇಧಿಸುವ ಚಿಂತನೆ ಇಲ್ಲ, ಅವರು ಕೂಡ ನಮ್ಮವರೇ ಇದ್ದಾರೆ. ಅವರ ಹಕ್ಕನ್ನು ಅವರು ಕೇಳಲಿ ಆದರೆ ಪುಂಡಾಟ, ಗಲಭೆ ಮಾಡುವುದು ಸರಿಯಲ್ಲ ಎಂದರು.
ಇಲ್ಲಿದೆ ಕ್ರಿಪ್ಟೋ ಕ್ರೆಡಿಟ್ ಕಾರ್ಡ್ ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ
ಬೆಳಗಾವಿಯಲ್ಲಿ ಎಂಇಎಸ್ ಪ್ರಭಾವ ಈ ಹಿಂದೆ ಇದ್ದಂತೆ ಇಲ್ಲ. ಬೆಳಗಾವಿ ಎಂಇಎಸ್ ನವರ ಕೈ ತಪ್ಪುತ್ತಿರುವ ಹಿನ್ನೆಲೆಯಲ್ಲಿ ಇಂತಹ ಘಟನೆ ನಡೆದಿದೆ. ಅಧಿವೇಶನ ಮುಗಿದ ಬಳಿಕ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.