alex Certify BIG NEWS: M.S ಬಿಲ್ಡಿಂಗ್ ಸಂಪ್ ನಲ್ಲಿ ಅಪರಿಚಿತ ಶವ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: M.S ಬಿಲ್ಡಿಂಗ್ ಸಂಪ್ ನಲ್ಲಿ ಅಪರಿಚಿತ ಶವ ಪತ್ತೆ

ಬೆಂಗಳೂರು: ವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ ಎಂ.ಎಸ್.ಬಿಲ್ಡಿಂಗ್ ನ ಸಂಪ್ ನಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ.

ಎಂ.ಎಸ್.ಬಿಲ್ಡಿಂಗ್ ನ ಅಗ್ನಿಶಾಮಕ ದಳ ಕಚೇರಿ ಬಳಿಯ ಸಂಪ್ ನಲ್ಲಿ ಮೃತದೇಹ ಪತ್ತೆಯಾಗಿದ್ದು, ಶವ ಕಂಡ ಅಗ್ನಿಶಾಮಕ ಸಿಬ್ಬಂದಿಗಳು ವಿಧನಸೌಧ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಪ್ ನಲ್ಲಿ ಪತ್ತೆಯಾಗಿರುವ ಶವದ ಮೇಲೆ ಯಾವುದೇ ಬಟ್ಟೆಗಳು, ಗಾಯದ ಗುರುತುಗಳು ಇಲ್ಲ. ಶವದ ಗುರುತು ಕೂಡ ಪತ್ತೆಯಾಗಿಲ್ಲ. ಸಾವಿರಾರು ಜನರು ಕೆಲಸ ಮಾಡುವ, ಸರ್ಕಾರಿ ಕಚೇರಿ, ಸಿಸಿಟಿವಿ ಕಣ್ಗಾವಲಿರುವ ಕಟ್ಟಡದ ಸಂಪ್ ನಲ್ಲಿ ವ್ಯಕ್ತಿಯ ಶವ ಪತ್ತೆಗೆ ಕಾರಣವೇನು? ಮೃತದೇಹ ಇಲ್ಲಿ ಬಂದದ್ದಾರೂ ಹೇಗೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...