alex Certify BIG NEWS: ITBP ಶಿಬಿರದಲ್ಲಿದ್ದ 2 AK-47 ರೈಫಲ್ ನಾಪತ್ತೆ; ಕಂಗಾಲಾದ ಅಧಿಕಾರಿಗಳು; ವಿಶೇಷ ಪೊಲೀಸ್ ತಂಡ ರಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ITBP ಶಿಬಿರದಲ್ಲಿದ್ದ 2 AK-47 ರೈಫಲ್ ನಾಪತ್ತೆ; ಕಂಗಾಲಾದ ಅಧಿಕಾರಿಗಳು; ವಿಶೇಷ ಪೊಲೀಸ್ ತಂಡ ರಚನೆ

ಬೆಳಗಾವಿ: ಬೆಳಗಾವಿಯ ಐಟಿಬಿಪಿ (ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್) ಶಿಬಿರದಲ್ಲಿದ್ದ 2 AK-47 ರೈಫಲ್ ಗಳು ಕಳುವಾಗಿದ್ದು, ಅಧಿಕಾರಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ಬೆಳಗಾವಿ ತಾಲೂಕಿನ ಹಾಲಬಾವಿಯಲ್ಲಿರುವ ಐಟಿಬಿಪಿ ಶಿಬಿರದಲ್ಲಿ ನಕ್ಸಲ್ ನಿಗ್ರಹ ತರಬೇತಿ ನಡೆಯುತ್ತಿದೆ. ತರಬೇತಿಗೆಂದು ಮಧುರೈನಿಂದ ಐಟಿಬಿಪಿ 45ನೇ ಬೆಟಾಲಿಯನ್ ಯೋಧರು ಆಗಮಿಸಿದ್ದು, ಈ ಯೋಧರ ಪೈಕಿ ರಾಜೇಶ್ ಕುಮಾರ್, ಸಂದೀಪ್ ಮೀನಾ ಅವರಿಗೆ ಸೇರಿದ ಎಕೆ-47 ರೈಫಲ್ ಗಳು ಕಳುವಾಗಿವೆ.

ಶಿಬಿರದಲ್ಲಿ ಆಗಸ್ಟ್ 17ರಂದು ರಾತ್ರಿ ಮಲಗುವಾಗ ಎಕೆ 47 ರೈಫಲ್ ಗಳನ್ನು ವಾಡಿಕೆಯಂತೆ ಭದ್ರತೆಯಲ್ಲಿಯೇ ಇಡಲಾಗಿದೆ. ಆದರೆ ಬೆಳಿಗ್ಗೆ ನೋಡುವಷ್ಟರಲ್ಲಿ 2 ರೈಫಲ್ ಗಳು ಕಣ್ಮರೆಯಾಗಿವೆ. ಎಕೆ-47 ರೈಫಲ್ ಗಳ ಪತ್ತೆಗಾಗಿ ಅಪರಾಧ ವಿಭಾಗದ ಡಿಸಿಪಿ ಪಿ.ವಿ.ಸ್ನೇಹಾ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಶೋಧ ಕಾರ್ಯ ತೀವ್ರಗೊಂಡಿದೆ.

ಒಂದು ವೇಳೆ ಕಳುವಾಗಿರುವ ರೈಫಲ್ ಗಳು ದುಷ್ಕರ್ಮಿಗಳ ಕೈಗೆ ಸಿಕ್ಕರೆ ಅನಾಹುತವೇ ಸಂಭವಿಸಬಹುದು ಎಂಬ ಆತಂಕ ಎದುರಾಗಿದ್ದು, ಜಿಲ್ಲೆಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...