alex Certify BIG NEWS: HDK ’ಪುಟಗೋಸಿ’ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು; ಮೈತ್ರಿ ಸರ್ಕಾರ ಪತನಕ್ಕೆ ಕುಮಾರಸ್ವಾಮಿಯೇ ಕಾರಣ; ವಿಪಕ್ಷ ನಾಯಕನ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: HDK ’ಪುಟಗೋಸಿ’ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು; ಮೈತ್ರಿ ಸರ್ಕಾರ ಪತನಕ್ಕೆ ಕುಮಾರಸ್ವಾಮಿಯೇ ಕಾರಣ; ವಿಪಕ್ಷ ನಾಯಕನ ವಾಗ್ದಾಳಿ

ಕಲಬುರ್ಗಿ: ಪುಟಗೋಸಿ ವಿಪಕ್ಷ ನಾಯಕ ಸ್ಥಾನಕ್ಕಾಗಿ ಮೈತ್ರಿ ಸರ್ಕಾರವನ್ನು ತೆಗೆದರು ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ದೇವೇಗೌಡರು ವಿಪಕ್ಷ ನಾಯಕನಾಗಿದ್ದರು ಹಾಗಾದರೆ ಅದುಕೂಡ ಪುಟಗೋಸಿನಾ? ಎಂದು ಪ್ರಶ್ನಿಸಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಂವಿಧಾನಿಕವಾಗಿರುವ ವಿಪಕ್ಷ ನಾಯಕನ ಹುದ್ದೆ ಕುಮಾರಸ್ವಾಮಿ ಪ್ರಕಾರ ’ಪುಟಗೋಸಿ’… ಅವರಿಗೆ ಇಂಥ ಅಭಿಪ್ರಾಯವಿದೆ ಎಂದು ಗೊತ್ತಿರಲಿಲ್ಲ. ಮುಖ್ಯಮಂತ್ರಿಯಾಗಿದ್ದವರು ಇಂತಹ ಮಾತುಗಳನ್ನಾಡಬಾರದು. ವಿಪಕ್ಷ ನಾಯಕನ ಹುದ್ದೆ ಅವರ ಪ್ರಕಾರ ಪುಟಗೋಸಿ ಎನ್ನುವುದಾದರೆ ಹೆಚ್.ಡಿ.ದೇವೇಗೌಡರೂ ವಿರೋಧ ಪಕ್ಷದ ನಾಯಕರಾಗಿದ್ದರು ಹಾಗಾದರೆ ಅದು ಕೂಡ ಪುಟಗೋಸಿನಾ? ಕುಮಾರಸ್ವಾಮಿ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಲಿ ಎಂದರು.

ಮಕ್ಕಳ ಶಾಲಾ ಶುಲ್ಕ ಕಟ್ಟುವ ಆತಂಕದಲ್ಲಿದ್ದ ಪೋಷಕರಿಗೆ ಗುಡ್ ನ್ಯೂಸ್

ಮೈತ್ರಿ ಸರ್ಕಾರ ಪತನಕ್ಕೆ ಕುಮಾರಸ್ವಾಮಿಯೇ ಕಾರಣ. ನನಗೆ ಮೈತ್ರಿ ಸರ್ಕಾರ ತೆಗೆಯುವ ಉದ್ದೇಶವಿದ್ದರೆ ನಾನು ಕುಮಾರಸ್ವಾಮಿಯನ್ನು ಸಿಎಂ ಮಾಡಲು ಒಪ್ಪುತ್ತಿರಲಿಲ್ಲ. ಮುಖ್ಯಮಂತ್ರಿಯಾದವರು ಯಾರಾದರೂ ಹೋಟೆಲ್ ನಲ್ಲಿ ಕುಳಿತು ಆಡಳಿತ ನಡೆಸುತ್ತಾರಾ? ಶಾಸಕರಿಗೆ ಸಿಎಂ ಭೇಟಿಯಾಗಲು ಆಗುತ್ತಿರಲಿಲ್ಲ, ಕುಮಾರಸ್ವಾಮಿ ಶಾಸಕರ ಸಮಸ್ಯೆಯನ್ನೂ ಆಲಿಸುತ್ತಿರಲಿಲ್ಲ. ಇದರಿಂದಾಗಿ ಶಾಸಕರಿಗೆ ಅಸಮಾಧಾನ ಉಂಟಾಯಿತು. ಕುಮಾರಸ್ವಾಮಿಯೇ ಮೈತ್ರಿ ಸರ್ಕಾರ ಉರುಳಲು ಕಾರಣ ಎಂದು ವಾಗ್ದಾಳಿ ನಡೆಸಿದರು.

ಗಮನಿಸಿ…! ವಾಯುಭಾರ ಕುಸಿತ ಪರಿಣಾಮ ಇನ್ನೂ 3 ದಿನ ಭಾರಿ ಮಳೆ, ಆರೆಂಜ್ ಅಲರ್ಟ್

ಇನ್ನು 23 ಶಾಸಕರು ನಮ್ಮ ಪಕ್ಷದಿಂದ ಬಿಜೆಪಿಗೆ ಹೋಗಿಲ್ಲ, ನಮ್ಮ ಪಕ್ಷದ 14 ಶಾಸಕರು ಬಿಜೆಪಿಗೆ ಹೋಗಿದ್ದಾರೆ. ಮೂವರು ಜೆಡಿಎಸ್ ಶಾಸಕರು ಬಿಜೆಪಿಗೆ ಹೋಗಿದ್ದಾರೆ. ಹಾಗಾದರೆ ಜೆಡಿಎಸ್ ಶಾಸಕರನ್ನೂ ನಾನೇ ಬಿಜೆಪಿಗೆ ಕಳುಹಿಸಿದ್ನಾ? ಕುಮಾರಸ್ವಾಮಿಯವರೇ ನಿಮಗೆ ಎಷ್ಟು ನಾಲಿಗೆಯಿದೆ? ಮನುಷ್ಯನಿಗೆ ಒಂದು ನಾಲಿಗೆಯಿರಬೇಕು. ಮಾತಿಗೆ ಬದ್ಧತೆ ಇರಬೇಕು ಎಂದು ಕಿಡಿಕಾರಿದರು.

ರಾಜಕೀಯವಾಗಿ ಕುಮಾರಸ್ವಾಮಿಯವರಿಗೆ ಸಿದ್ದರಾಮಯ್ಯನನ್ನು ಕಂಡರೆ ಭಯ. ಹಾಗಾಗಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ರಾಜಕೀಯವಾಗಿ ಯಾರ ಮೇಲೆ ಭಯವಿರುತ್ತೋ ಅವರನ್ನು ಟಾರ್ಗೆಟ್ ಮಾಡುತ್ತಾರೆ ಎಂದು ಟಾಂಗ್ ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...