alex Certify BIG NEWS : ರಾಜ್ಯ ಸರ್ಕಾರದಿಂದ ʻಗೊಂಡ, ರಾಜಗೊಂಡ, ಕಾಡು ಕುರುಬ ಜನಾಂಗ’ದವರಿಗೆ ಸಿಹಿಸುದ್ದಿ : ‘ಪರಿಶಿಷ್ಟ ಜಾತಿ ಪ್ರಮಾಣ ಪತ್ರʼ ವಿತರಣೆಗೆ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯ ಸರ್ಕಾರದಿಂದ ʻಗೊಂಡ, ರಾಜಗೊಂಡ, ಕಾಡು ಕುರುಬ ಜನಾಂಗ’ದವರಿಗೆ ಸಿಹಿಸುದ್ದಿ : ‘ಪರಿಶಿಷ್ಟ ಜಾತಿ ಪ್ರಮಾಣ ಪತ್ರʼ ವಿತರಣೆಗೆ ಆದೇಶ

ಕಲಬುರಗಿ, ಬೀದ‌ರ್ ಮತ್ತು ಯಾದಗಿರಿ ಜಿಲ್ಲೆಯ ಗೊಂಡ, ರಾಜಗೊಂಡ, ಕಾಡುಕುರುಬ, ಹಾಗೂ ಕೊಡಗು ಜಿಲ್ಲೆಯ ಕುರುಬ ಜನಾಂಗಕ್ಕೆ, ಸೇರಿದವರಿಗೆ ವರಿಶಿಷ್ಟ ವಂಗಡದ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರ ಪಡೆಯುವ ಕುರಿತಂತೆ ರಾಜ್ಯ ಸರ್ಕಾರವ ಮಹತ್ವದ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ಹೊರಡಿಸಿರುವ ಆದೇಶದಲ್ಲಿ ದಿನಾಂಕ 25 08 2023 ರಂದು ಸನ್ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಯ ಗೊಂಡ, ರಾಜಗೊಂಡ, ಕಾಡುಕುರುಬ ಹಾಗೂ ಕೊಡಗು ಜಿಲ್ಲೆಯ ಕುರುಬ ಜಾತಿಗಳ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ/ಸಿಂಧು ಪ್ರಮಾಣ ವತ್ರ ವಡೆಯಲು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಚರ್ಚಿಸಿ, ತೆಗೆದುಕೊಂಡ ನಿರ್ಣಯಗಳ ಸಭಾ ನಡವಳಿಯನ್ವಯ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಇತರ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಕೆಳಕಂಡಂತೆ ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಜಾತಿ ಮತ್ತು ಸಿಂಧುತ ಪ್ರಮಾಣ ವತ್ರಗಳನ್ನು ನೀಡಲು ಅನುಸರಿಸಬೇಕಾದ ವಿಧಿ ವಿಧಾನಗಳ ಬಗ್ಗೆ ಕರ್ನಾಟಕ ಅನುಸೂಚಿತ ಜಾತಿಗಳು. ಅನುಸೂಚಿತ ಬುಡಕಟ್ಟುಗಳು ಹಾಗೂ ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ಅಧಿನಿಯಮ 1990 ನಿಯಮಗಳು 1992 ರಡಿ ವಿಸ್ತ್ರತವಾಗಿ ವಿವರಿಸಲಾಗಿದೆ.

2 ಜಾತಿ ಮತ್ತು ಸಿಂಧುತ್ವ ಪ್ರಮಾಣ ಪತ್ರಗಳ ಬಗ್ಗೆ, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋ-ಮೋಟೊ ಪ್ರಕರಣಗಳನ್ನು ಕೈಗೆತ್ತಿಕೊಂಡು ವಿಚಾರಣೆ ಮಾಡಬಾರದು. ಜಿಲ್ಲಾ ಜಾತಿ, ವರಿಶೀಲನಾ ಸಮಿತಿಯು ವಹಿಸಿದ ಪ್ರಕರಣಗಳನ್ನು ಹಾಗೂ ದೂರು ಬಂದಲ್ಲಿ ವಿಚಾರಣೆ ಮಾಡತಕ್ಕದು.

3 ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯಲ್ಲಿ ಬಾಕಿ ಇರುವ ಜಾತಿ/ಸಿಂಧುತ್ವ ಪ್ರಮಾಣ ಪತ್ರ ಪ್ರಕರಣಗಳನ್ನು ಎಸ್.ಸಿ/ಎಸ್.ಟಿ/ಒ.ಬಿ.ಸಿ ಮೀಸಲಾತಿ ಕಾಯ 1990 ಕಲಂ 4 (ಸಿ) (3) ರನ್ವಯ ನಿಗಧಿಪಡಿಸಿದ ಅವಧಿಯೊಳಗೆ ವಿಲೇವಾರಿ ಮಾಡತಕ್ಕದ್ದು

4 ಗೊಂಡ, ರಾಜಗೊಂಡ, ಕಾಡುಕುರುಬ ಮತ್ತು ಕೊಡಗು ಜಿಲ್ಲೆಯ ಕುರುಬ ಜಾತಿಗಳಿಗೆ ಸೇರಿದ ವ್ಯಕ್ತಿಗಳಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ/ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡುವ ಬಗೆ, ಸರ್ಕಾರದಿಂದ ಈಗಾಗಲೇ ಸುತ್ತೋಲೆ/ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳು ಸಲ್ಲಿಸುವ ದಾಖಲೆಗಳನ್ನು ಪರಿಶೀಲಿಸಿ ಸ್ಥಳೀಯ ವಿಚಾರಣೆ/ಮಹಜರ್ ಮಾಡಿ ಶಾಲಾ ದಾಖಲಾತಿಗಳಲ್ಲಿ ಈ ಜಾತಿಗಳ ಬಗ್ಗೆ, ನಮೂದಾಗಿದ್ದರೆ ಅದನ್ನು ಒಂದು ಸಾಕ್ಷವೆಂದು ಪರಿಗಣಿಸತಕ್ಕದು.

5 ಗೊಂಡ, ರಾಜ ಗೊಂಡ, ಕಾಡುಕುರುಬ ಮತ್ತು ಕೊಡಗು ಜಿಲ್ಲೆಯ ಕುರುಬ ಜನಾಂಗದವರಿಗೆ ಜಾತಿ |ಸಿಂಧುತ್ವ ಪ್ರಮಾಣ ಪತ್ರ ನೀಡುವ ಬಗ್ಗೆ ಸರ್ಕಾರದಿಂದ ಈಗಾಗಲೇ ಹಲವಾರು ಸುತ್ತೋಲೆ ಹಾಗೂ ಆದೇಶಗಳನ್ನು ನೀಡಿದಾಗೂ ಸದರಿ ಕಾಲದವರಿಗೆ ಜಾತಿ/ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಗಂಭೀರವಾಗಿ ವರಿಗಣಿಸಿದ್ದು, ಸಕಾಲದಲ್ಲಿ ವಮಾಣ ಪತ್ರಗಳನ್ನು ನೀಡಲು ಕ್ರಮತೆಗೆದುಕೊಳ್ಳುವುದು

6 ಸರ್ಕಾರಿ ಉದ್ಯೋಗಗಳಿಗೆ ಜಾತಿ ಮತ್ತು ಆದಾಯ ಸಿಂಧುತ್ವ ಪ್ರಮಾಣ ಪತ್ರ ನೀಡುವಾಗ ತಹಶೀಲ್ದಾರರು ನೀಡಿದ ಜಾತಿ ಮತ್ತು ಜಾತಿ ಆದಾಯ ಪ್ರಮಾಣ ಪತ್ರದ ನೈಜತ ಪರಿಶೀಲನೆಗಾಗಿ ಸರ್ಕಾರವು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯಲ್ಲಿ ಮಂಡಿಸಿ ನಿಯಮಾನುಸಾರ ಇತ್ಯರ್ಥವದಿಸಬೇಕು.

7 ಒಂದು ವೇಳೆ ತಕರಾರು ಇದ್ದಲ್ಲಿ ನಿಯಮಾನುಸಾರ ವಿಚಾರಣೆ ಮಾಡಿ ಅರ್ಹರಿಗೆ ಜಾತಿ ಸಿಂಧುತ್ವ ಪ್ರಮಾಣ ಪತ್ರ ನೀಡಬೇಕು ಅರ್ಹರಿಲ್ಲದಿದ್ದಲ್ಲಿ ಯಾವ ಕಾರಣದ ಮೇಲೆ ತಿರಸ್ಕರಿಸಲಾಗುತ್ತಿದೆ ಎಂಬ ಬಗ್ಗೆ ವಿವರವಾದ ಆದೇಶವನ್ನು (Speaking Order) ಹೊರಡಿಸತಕ್ಕದು.

8  ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ರವರು ಕೆಲವು ಪ್ರಕರಣಗಳನ್ನು ವಿಚಾರಣ ಮಾಡಿ ಅರ್ಹರೆಂದು ವರದಿ ಸಲ್ಲಿಸಿದ ಪ್ರಕರಣಗಳನ್ನು ನಿಯಮಾನುಸಾರ ಇತ್ಯರ್ಥಪಡಿಸತಕ್ಕದು.

9  ಶಾಲಾ ದಾಖಲಾತಿಗಳಲ್ಲಿ ಈ ಮೊದಲೇ ಜೇನು ಕುರುಬ, ಕಾಡುಕುರುಬ, ಗೊಂಡ, ರಾಜಗೊಂಡ ವಡೆಯಲಿಚ್ಛಿಸುವ ಜಾತಿಗೆ ಸೇರಿದವರು ಎಂಬ ಬಗ್ಗೆ ಸಾಕ್ಷವೆಂದು ಪರಿಗಣಿಸತಕ್ಕದು

ಮೇಲ್ಕಂಡ ಅಂಶಗಳನ್ನು ಅನುಸರಿಸಿ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಯ ಗೊಂಡ, ರಾಜಗೊಂಡ, ಕಾಡುಕುರುಬ ಹಾಗೂ ಕೊಡಗು ಜಿಲ್ಲೆಯ ಕುರುಬ ಜಾತಿಗಳಿಗೆ ಸೇರಿದ ವ್ಯಕ್ತಿಗಳಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ/ಸಿಂಧು ಪ್ರಮಾಣ ಪತ್ರಗಳನ್ನು ನೀಡಲು ಕ್ರಮವಹಿಸಲು ಸೂಚಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...