alex Certify BIG NEWS : ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ : ನಿವೃತ್ತಿ ವೇತನದ ನಿಯಮಗಳು, ಸೌಲಭ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ : ನಿವೃತ್ತಿ ವೇತನದ ನಿಯಮಗಳು, ಸೌಲಭ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ ನಿವೃತ್ತಿ ವೇತನ ನಿಯಮಗಳ ಕುರಿತು ಕರ್ನಾಟಕ ನಾಗರೀಕ ಸೇವಾ ನಿಯಮಗಳು- 1958 ರ ಭಾಗ-4 ರಲ್ಲಿ ಪ್ರಸ್ತಾಪಿಸಲಾಗಿದ್ದು, ಕೆಲವು ಆಯ್ದ ಮಾಹಿತಿಗಳನ್ನು ಪ್ರಸ್ತುತಪಡಿಸಲಾಗಿದೆ.

ನಿವೃತ್ತಿಯ ಅವಶ್ಯಕತೆ
• ಸಾಮಾನ್ಯ ಜನರಂತೆ ಸರ್ಕಾರಿ ನೌಕರರು ಕೂಡ ಶಕ್ತಿಯಿರುವ ವರೆಗೆ ದುಡಿಯುತ್ತಾರೆ.
• ವಯಸ್ಸು ಆದಂತೆ ಕರ್ತವ್ಯ ದಕ್ಷತೆ ಕಡಿಮೆಯಾಗುತ್ತದೆ
• ಆರಂಭದಲ್ಲಿ ಇದ್ದ ಹುರುಪು ಉತ್ಸಾಹ ಇರುವುದಿಲ್ಲ
• ಇದರಿಂದ ಸಾರ್ವಜನಿಕರ ಕೆಲಸಗಳು ವಿಳಂಬಿಸುತ್ತವೆ
• ಹೊಸತಲೆಮಾರಿಗೆ ಉದ್ಯೋಗದ ಅವಶ್ಯಕತೆ
• ಅದಕ್ಕಾಗಿ ನಿವೃತ್ತಿ ಅನಿವಾರ್ಯವಾಗುತ್ತದೆ

ನಿವೃತ್ತಿ ವಯಸ್ಸು
• ಯಾವ ವಯಸ್ಸಿಗೆ ನಿವೃತ್ತಿಯಾಗಬೇಕು
• ನಿವೃತ್ತಿಯ ವಯಸ್ಸು ಆಯಾ ದೇಶಗಳ ವಾತವರಣವನ್ನು ಹಾಗೂ ಜೀವಿತಾವಧಿಯನ್ನು ಅವಲಂಬಿಸಿರುತ್ತದೆ
• ಯು ಎಸ್ ಎ ನಲ್ಲಿ ಜೀವಿತಾವಧಿ ವಯಸ್ಸು 65-70
• ಬ್ರಿಟನ್ ನಲ್ಲಿ ಜೀವಿತಾವಧಿ ವಯಸ್ಸು
60-65
• ಭಾರತದಲ್ಲಿ ಜೀವಿತಾವಧಿ ವಯಸ್ಸು 55-60

ನಿವೃತ್ತಿ ಸೌಲಭ್ಯಗಳ ಸಿದ್ದಾಂತಗಳು

• ಪ್ರತಿಯೊಂದು ದೇಶದಲ್ಲೂ ಕೂಡ ಸರ್ಕಾರಿ ಸೇವೆಯಿಂದ ನಿವೃತ್ತರಾದವರಿಗೆ ಅವರ ಇಳಿವಯಸ್ಸಿನಲ್ಲಿ ಪರಿಹಾರವಾಗಿ ಮಾಸಿಕ ಮೊಬಲಗು ಅಥವಾ ಹಿಡಿಗಂಟಾಗಿ ಹಣವನ್ನು ಪಾವತಿದಲಾಗುತ್ತಿದೆ
• ಇದಕ್ಕಾಗಿ ಅಯವ್ಯಯದಲ್ಲಿ ಸರ್ಕಾರ ಹಣವನ್ನು ಕಾಯ್ದಿರಿಸುತ್ತದೆ
• ಈ ರೀತಿಯ ಉಪಲಬ್ದಗಳು ಪಾವತಿಸದಿದ್ದರೆ ಏನಾಗುತ್ತಿತ್ತು
ಅ]ನೌಕರನು ಸಾಯುವತನಕ ವಿರಾಮವಿಲ್ಲದೆ ದುಡಿಯಬೇಕಿತ್ತು
ಆ]ವಯಸ್ಸಾದ ನೌಕರರ ಸಂಖ್ಯೆ ಹೆಚ್ಚಳವಾಗಿ ಆಡಳಿತ ದುರ್ಬಲವಾಗುತ್ತಿದೆ

ನಿವೃತ್ತಿ ಸೌಲಭ್ಯಗಳ ಸಿದ್ದಾಂತಗಳು
• ಉಪಲಬ್ದಗಳಿಲ್ಲದೆ ನಿವೃತ್ತಿಗೊಳಿಸಿದರೆ ನೌಕರನು ನಿರ್ಗತಿಕನಾಗುತ್ತಿದ್ದ
• ನೌಕರನ ಜೀವನ ಕಷ್ಟಕರವಾಗುತಿತ್ತು
• ಯಾರೂ ಸರ್ಕಾರಿ ನೌಕರಿಯನ್ನು ಬಯಸುತ್ತಿರಲಿಲ್ಲ
ಸರ್ಕಾರಿ ನೌಕರಿಗೆ ಘನತೆ ಇರುತ್ತಿರಲಿಲ್ಲ
ನೌಕರರು ಹತಾಷರಾಗಿ ಲಂಚಕೋರರಾಗುತಿದ್ದರು
• ಸೇವೆಯಲ್ಲಿ ಇರುವ ತನಕ ದೋಚುತ್ತಿದ್ದರು

ನಿವೃತ್ತಿ ವೇತನ ಸೌಲಭ್ಯಗಳನ್ನು ಎರಡು ಭಾಗಗಳನ್ನಾಗಿ ಮಾಡಿದೆ

1.ನಿವೃತ್ತಿಯಾದಾಗ ದೊರೆಯುವ ಉಪಲಬ್ದಗಳು
2.ಸೇವೆಯಲ್ಲಿ ಮರಣ ಹೊಂದಿದಾಗ ದೊರೆಯುವ ಉಪಲಬ್ದಗಳು
ನಿವೃತ್ತಿಯಾದಾಗ ದೊರೆಯುವ ಉಪಲಬ್ದಗಳು:
1.ನಿವೃತ್ತಿ ವೇತನ
2.ಸೇವಾ ಉಪದಾನ
3.ಪರಿವರ್ತಿತ ಪಿಂಚಣಿ
4.ಸೇವಾಂತ್ಯದಲ್ಲಿ ಉಳಿದಿರುವ ಗಳಿಕೆರಜೆ ನಗದೀಕರಣ ಸೌಲಭ್ಯ[118 ಎ]
5.ಸಾಮೂಹಿಕ ವಿಮಾ ಯೋಜನೆ ಉಳಿತಾಯ ನಿಧಿ ಮೊತ್ತ
6.ಸಾಮಾನ್ಯ ಭವಿಷ್ಯ ನಿಧಿ ಮೊತ್ತ
7.ನಿವೃತ್ತಿ ಸ್ಥಳಕ್ಕೆ ಪ್ರಯಾಣ ಮಾಡಿದಾಗ ಉಂಟಾಗುವ ವೆಚ್ಚಗಳು[548ಎ]

2.ಸೇವೆಯಲ್ಲಿ ಮರಣ ಹೊಂದಿದಾಗ ದೊರೆಯುವ ಉಪಲಬ್ದಗಳು
1.ಕುಟುಂಬ ನಿವೃತ್ತಿ ವೇತನ
2.ಮರಣ ಉಪದಾನ
3.ಮರಣ ಹೊಂದಿದ ದಿನದಂದು ಉಳಿದಿರುವ ಗಳಿಕೆರಜೆ ನಗದೀಕರಣ ಸೌಲಭ್ಯ
5.ಸಾಮೂಹಿಕ ವಿಮಾ ಯೋಜನೆ ವಿಮಾನಿಧಿ & ಉಳಿತಾಯ ಮೊತ್ತ
6.ಸಾಮಾನ್ಯ ಭವಿಷ್ಯ ನಿಧಿ ಮೊತ್ತ
7.ಸ್ವಗ್ರಾಮಕ್ಕೆ ಪ್ರಯಾಣ ಮಾಡಿದಾಗ ಉಂಟಾಗುವ ವೆಚ್ಚಗಳು

ಸಾಮಾನ್ಯ ನಿವೃತ್ತಿ ವೇತನ ನಿಯಮಗಳು: ಕನಾಸೇನಿ-207-383

• ನಿವೃತ್ತಿ ವೇತನ ಎಂದರೆ ನಿವೃತ್ತಿ ವೇತನ ಹಾಗೂ ಸೇವಾ ಉಪದಾನ ಸೇರಿರುತ್ತದೆ.[208]
• ನಿವೃತ್ತಿ ವೇತನವನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರಿ ಕಚೇರಿ ಮುಖ್ಯಸ್ಥರಾಗಿರುತ್ತಾರೆ[209]
• ನಿವೃತ್ತಿ ವೇತನ ಪಡೆಯಲು ಸರ್ಕಾರಿ ನೌಕರ ಒಳ್ಳೆಯ ನಡತೆಯನ್ನು ಹೊಂದಿರಬೇಕು
• ನಿವೃತ್ತಿ ವೇತನ ಪಡೆಯುವ ನೌಕರನು ಅಪರಾಧಿ ಅಥವಾ ತಪ್ಪಿತಸ್ಥನೆಂದು ತಿಳಿದು ಬಂದರೆ ನಿವೃತ್ತಿ ವೇತನವನ್ನು ತಡೆಯಿಡಿಯಬಹುದು ಅಥವಾ ಭಾಗಶಃ ಅಥವಾ ಸಂಪೂರ್ಣ ಹಿಂತೆಗೆದುಕೊಳ್ಳಬಹುದು.[213]
• ದುರ್ವತ್ರನೆಗಾಗಿ ಅಥವಾ ನಿರ್ಲಕ್ಷ್ಯಕ್ಕಾಗಿ ನಿವೃತ್ತ ವೇತನವನ್ನು ತಡೆಯಿಡಿಯಬಹುದು[214]
• ಕಡ್ಡಾಯ ನಿವೃತ್ತಿ ವಯಸ್ಸನ್ನು ತಲುಪಿ ಅಥವ ನಿವೃತ್ತಿ ದಿನಾಂಕದಂದು ಅಮಾನತ್ತು ಆದರೆ ಅವರಿಗೆ ತಾರ್ತ್ತೂತಿಕ ಪಿಂಚಣಿ ಮಂಜೂರು ಮಾಡಬೇಕು

 

 

 

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...