alex Certify BIG NEWS : ಬಿಜೆಪಿಗೆ ಹೋಗುವುದಕ್ಕಿಂತ ಸಾಯೋದೆ ಮೇಲು : ನಿತೀಶ್ ಕುಮಾರ್ ಹಳೆ ವಿಡಿಯೋ ವೈರಲ್ |Watch Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಬಿಜೆಪಿಗೆ ಹೋಗುವುದಕ್ಕಿಂತ ಸಾಯೋದೆ ಮೇಲು : ನಿತೀಶ್ ಕುಮಾರ್ ಹಳೆ ವಿಡಿಯೋ ವೈರಲ್ |Watch Video

ನವದೆಹಲಿ: ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ (ಜನವರಿ 28) ರಂದು ಇಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ನಿತೀಶ್ ಕುಮಾರ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ ಬಿಜೆಪಿಗೆ ಹೋಗುವ ಬದಲು ಸಾಯಲು ಬಯಸುತ್ತೇನೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳುವ ಹಳೆಯ ವೀಡಿಯೊ ವೈರಲ್ ಆಗಿದೆ.

ಒಂದು ವರ್ಷದ ಹಳೆಯ ವೀಡಿಯೊವನ್ನು ಹಲವಾರು ರಾಜಕೀಯ ನಾಯಕರು ಹಂಚಿಕೊಂಡಿದ್ದಾರೆ. ಮತ್ತೆ ಬಿಜೆಪಿ ಜತೆ ಕೈಜೋಡಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನಿತೀಶ್ ಕುಮಾರ್ ಬಿಜೆಪಿಗೆ ಹೋಗುವ ಬದಲು ಸಾಯೋದೇ ಮೇಲು ಎಂದು ಹೇಳುವ ಹಳೆಯ ವಿಡಿಯೋ ವೈರಲ್ ಆಗಿದೆ. ಬಿಜೆಪಿಯವರು ಹೇಳುವುದೆಲ್ಲ ಸುಳ್ಳು. ಅವರು ತೇಜಸ್ವಿ ಯಾದವ್ ಹಾಗೂ ಅವರ ತಂದೆ ಮೇಲೆ ಯಾವುದೇ ಕಾರಣ ಇಲ್ಲದೆ ಪ್ರಕರಣ ದಾಖಲಿಸಿದ್ದಾರೆ”, ಎಂದು ಕೂಡ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನಿತೀಶ್ 2023 ರಲ್ಲಿ ಹೇಳಿದ್ದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...