alex Certify BIG NEWS: 40 ಪೈಸೆ ಹೆಚ್ಚು ಶುಲ್ಕ ವಿಧಿಸಿದ್ದಕ್ಕಾಗಿ ಹೋಟೆಲ್ ವಿರುದ್ಧ ಮೊಕದ್ದಮೆ ಹೂಡಿದ್ದ ಗ್ರಾಹಕರಿಗೆ ಮುಖಭಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 40 ಪೈಸೆ ಹೆಚ್ಚು ಶುಲ್ಕ ವಿಧಿಸಿದ್ದಕ್ಕಾಗಿ ಹೋಟೆಲ್ ವಿರುದ್ಧ ಮೊಕದ್ದಮೆ ಹೂಡಿದ್ದ ಗ್ರಾಹಕರಿಗೆ ಮುಖಭಂಗ

ಬೆಂಗಳೂರು: ರೆಸ್ಟೋರೆಂಟ್‌ನಲ್ಲಿ 40 ಪೈಸೆ ಹೆಚ್ಚು ವಿಧಿಸಿದ್ದಕ್ಕಾಗಿ ವ್ಯಕ್ತಿಯೊಬ್ಬರು ಮೊಕದ್ದಮೆ ಹೂಡಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯವು, ದೂರುದಾರರಿಗೆ 4,000 ರೂ. ದಂಡ ವಿಧಿಸಿದೆ.

ನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿದ್ದು ಮಾತ್ರವಲ್ಲದೆ, ಸರ್ಕಾರದ ನಿಯಮಗಳ ಪ್ರಕಾರ 50 ಪೈಸೆಗಿಂತ ಹೆಚ್ಚಿನದನ್ನು ಒಂದು ರೂಪಾಯಿಗೆ ತೆಗೆದುಕೊಳ್ಳಬಹುದಾಗಿದೆ ಎಂದು ತೀರ್ಪು ನೀಡಿದೆ.‌

ಪ್ರಚಾರಕ್ಕಾಗಿ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ನ್ಯಾಯಾಧೀಶರು ದೂರುದಾರರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, 4000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಈ ಘಟನೆಯು ಮೇ 21, 2021 ರಂದು ಸಂಭವಿಸಿದೆ ಎಂದು ವರದಿಯಾಗಿದೆ. ಮೂರ್ತಿ ಎಂದು ಗುರುತಿಸಲಾದ ಹಿರಿಯ ನಾಗರಿಕರು ಬೆಂಗಳೂರಿನ ಸೆಂಟ್ರಲ್ ಸ್ಟ್ರೀಟ್‌ನಲ್ಲಿರುವ ಹೋಟೆಲ್ ಎಂಪೈರ್‌ಗೆ ಭೇಟಿ ನೀಡಿ, ಆಹಾರವನ್ನು ಆರ್ಡರ್ ಮಾಡಿದ್ದಾರೆ. ಈ ವೇಳೆ 264.60 ರೂ. ಆಗಿದ್ದು, 265 ರೂ. ಬಿಲ್ ನೀಡಲಾಗಿದೆ. ಈ ಕುರಿತು ಮೂರ್ತಿ ಅವರು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.

ಹೋಟೆಲ್ ಸಿಬ್ಬಂದಿ ಸರಿಯಾಗಿ ಪ್ರತಿಕ್ರಿಯೆ ನೀಡದ ಕಾರಣ ಕೋಪಗೊಂಡ ಗ್ರಾಹಕ ಮೂರ್ತಿ, ರೆಸ್ಟೋರೆಂಟ್ ಗ್ರಾಹಕರನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿ ಬೆಂಗಳೂರು ಗ್ರಾಹಕರ ನ್ಯಾಯಾಲಯಕ್ಕೆ ಅವರು ದೂರು ನೀಡಿದ್ದಾರೆ.

ಜೂನ್ 26, 2021 ರಂದು ದಾಖಲಾದ ಮೊಕದ್ದಮೆಯಲ್ಲಿ ಮೂರ್ತಿ ತಮ್ಮದೇ ಆದ ಪ್ರಕರಣವನ್ನು ಪ್ರಸ್ತುತಪಡಿಸಿದ್ದಾರೆ. ವಾದಗಳನ್ನು ಆಲಿಸಿದ ನ್ಯಾಯಾಲಯವು ಮಾರ್ಚ್‌ 4, 2022 ರಂದು ತೀರ್ಪು ನೀಡಿದ್ದು, 40 ಪೈಸೆ ವಸೂಲಿ ಮಾಡುವಲ್ಲಿ ರೆಸ್ಟೋರೆಂಟ್‌ನ ಕಡೆಯಿಂದ ಯಾವುದೇ ಲೋಪವಿಲ್ಲ ಎಂದು ಉಲ್ಲೇಖಿಸಿದೆ. ದೂರುದಾರನು ವೈಯಕ್ತಿಕ ಪ್ರಚಾರಕ್ಕಾಗಿ ಬಳಸಿಕೊಂಡಿದ್ದಲ್ಲದೆ, ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ ಪ್ರಕರಣದಲ್ಲಿ ಯಾವುದೇ ಪರಿಹಾರಕ್ಕೆ ಅರ್ಹರಲ್ಲ ಎಂದು ತೀರ್ಪು ನೀಡಿದೆ. ಅಲ್ಲದೆ ಹೋಟೆಲ್ ವ್ಯವಸ್ಥಾಪಕರಿಗೆ 2,000 ರೂ. ಹಾಗೂ ನ್ಯಾಯಾಲಯದ ವೆಚ್ಚಕ್ಕಾಗಿ 2,000 ರೂ. ಅನ್ನು 30 ದಿನಗಳಲ್ಲಿ ಪಾವತಿಸುವಂತೆ ಆದೇಶಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...