alex Certify BIG NEWS: 2022-23ನೇ ಸಾಲಿನ ಬಜೆಟ್ ಮಂಡಿಸಿದ ಬಿಹಾರ ಸರ್ಕಾರ; ಆರು ಮೂಲಮಂತ್ರಗಳ ಮೂಲಕ ರಾಜ್ಯದ ಅಭಿವೃದ್ಧಿ ಪಣತೊಟ್ಟ ನಿತೀಶ್ ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 2022-23ನೇ ಸಾಲಿನ ಬಜೆಟ್ ಮಂಡಿಸಿದ ಬಿಹಾರ ಸರ್ಕಾರ; ಆರು ಮೂಲಮಂತ್ರಗಳ ಮೂಲಕ ರಾಜ್ಯದ ಅಭಿವೃದ್ಧಿ ಪಣತೊಟ್ಟ ನಿತೀಶ್ ಪಡೆ

ಬಿಹಾರದ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ತಾರ್ಕಿಶೋರ್ ಪ್ರಸಾದ್ ಅವರು 2022-23 ನೇ ಸಾಲಿನ ಹಣಕಾಸು ಬಜೆಟ್ ಅನ್ನು ಇಂದು ಮಂಡಿಸಿದ್ದಾರೆ. ಅವರು ಒಟ್ಟು 2 ಲಕ್ಷ 37 ಸಾವಿರದ 691 ಕೋಟಿ ಬಜೆಟ್ ಮಂಡಿಸಿದ್ದಾರೆ.

ತಾರಕಿಶೋರ್ ಪ್ರಸಾದ್ ಅವರು ಬಜೆಟ್ ಭಾಷಣವನ್ನು ಕೌಟಿಲ್ಯನ ಅರ್ಥಶಾಸ್ತ್ರದ ಸಂಸ್ಕೃತ ಶ್ಲೋಕದೊಂದಿಗೆ ಪ್ರಾರಂಭಿಸಿದರು ಎಂಬುದು ಗಮನಾರ್ಹ. ಬಿಹಾರ ಸರ್ಕಾರ ರಾಜ್ಯದ ಅಭಿವೃದ್ಧಿಗೆ 6 ಅಂಶಗಳ ಮಾದರಿಯನ್ನು ನೀಡಿರುವುದು, ಇಂದಿನ ಬಜೆಟ್ನ ಹೈಲೈಟ್ ಎನ್ನಲಾಗಿದೆ.‌

ಮೊದಲೇ ಹೇಳಿದಂತೆ ಈ ಹಣಕಾಸು ಬಜೆಟ್ನಲ್ಲಿ ಎಲ್ಲರನ್ನು ಸೆಳೆದಿದ್ದು, ಆರು ಅಂಶಗಳ ಮಾದರಿ. ಹಾಗಾದ್ರೆ ಈ ಆರು ಅಂಶಗಳು ಏನು ಎನ್ನುವುದನ್ನ ನೋಡುವುದಾದರೆ ಅವುಗಳು, ಆರೋಗ್ಯ, ಶಿಕ್ಷಣ, ಉದ್ಯಮದಲ್ಲಿ ಹೂಡಿಕೆ, ಕೃಷಿ ಮತ್ತು ಸಂಬಂಧಿತ ವಲಯಗಳು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮೂಲಸೌಕರ್ಯ ಕಲ್ಪಿಸುವುದು ಹಾಗೂ ವಿವಿಧ ವರ್ಗಗಳ ಕಲ್ಯಾಣ.

ಒಟ್ಟು 45 ನಿಮಿಷಗಳ ಕಾಲ ನೀಡಿದ ಭಾಷಣದಲ್ಲಿ ಸಚಿವರು ಈ ಆರು ಅಂಶಗಳಿಗೆ ಒತ್ತು ನೀಡಿರುವ ಬಗ್ಗೆ ತಿಳಿಸಿದರು.‌ ಈ ಆರು ಸೂತ್ರಗಳು ಮಾನವ ಜೀವನಕ್ಕೆ ಸಂಬಂಧಿಸಿವೆ ಮತ್ತು ಅಭಿವೃದ್ಧಿಯಲ್ಲಿ ಇವು ದೊಡ್ಡ ಪಾತ್ರ ವಹಿಸುತ್ತವೆ. ಸರ್ಕಾರವು 2022-23 ರ ಆರ್ಥಿಕ ವರ್ಷದಲ್ಲಿ ಈ ಆರು ಸೂತ್ರಗಳ ಅನುಷ್ಠಾನಕ್ಕೆ ಗಮನ ಹರಿಸಲಿದೆ ಎಂದರು.

ಬಿಹಾರದ ಬಜೆಟ್ನ ಪ್ರಮುಖ ಅಂಶಗಳು

•ಒಟ್ಟು 2 ಲಕ್ಷ 37 ಸಾವಿರದ 691 ಕೋಟಿ ಬಜೆಟ್ ಮಂಡನೆ.

•ಬಜೆಟ್ನ ಒಟ್ಟು ಮೌಲ್ಯದಲ್ಲಿ 16.5% ಅಂದರೆ 39,191 ಕೋಟಿ ಹಣವನ್ನು ಶಿಕ್ಷಣ ಕ್ಷೇತ್ರದ ವಿಕಾಸಕ್ಕಾಗಿ ಮೀಸಲಿಡಲಾಗಿದೆ.

•ಕೃಷಿ ಕ್ಷೇತ್ರಕ್ಕೆ 754 ಕೋಟಿ ಹಾಗೂ ಉದ್ಯೋಗ ಕ್ಷೇತ್ರಕ್ಕೆ 1643 ಕೋಟಿ ಮೀಸಲು

•ಹಳ್ಳಿಗಳ ಅಭಿವೃದ್ಧಿಗಾಗಿ ಹೆಚ್ಚಿನ ಮಹತ್ವ ನೀಡಿದ್ದು, ಸ್ವಚ್ಛ್ ಗಾಂವ್- ಸಮೃದ್ಧ್ ಗಾಂವ್ ಯೋಜನೆಗೆ 847 ಕೋಟಿ ಘೋಷಿಸಲಾಗಿದೆ, ಈ ಯೋಜನೆಯಡಿಯಲ್ಲಿ ಬೀದಿ ದೀಪಗಳನ್ನು ಸಹ ಅಳವಡಿಸಲಾಗುತ್ತಿದೆ. ಜೊತೆಗೆ ಗ್ರಾಮಗಳ ಪ್ರತಿ ಮನೆಗು ನಲ್ಲಿಯ ಸೌಲಭ್ಯ ನೀಡಲು 1,110 ಕೋಟಿ ಘೋಷಿಸಲಾಗಿದೆ.

•ಮಹಿಳಾ ಶಿಕ್ಷಣ ಪ್ರೋತ್ಸಾಹಿಸಲು 900 ಕೋಟಿ ಮೀಸಲು

•ಆರೋಗ್ಯ ಕ್ಷೇತ್ರದ ಅಭಿವೃದ್ಧಿಗಾಗಿ 16,134 ಕೋಟಿ‌ ಮೀಸಲು

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...