alex Certify BIG NEWS: 2022ರ ವಿಧಾನಸಭಾ ಚುನಾವಣೆ; ಬಿಜೆಪಿ ಉಸ್ತುವಾರಿಗಳ ನೇಮಕ; ಉತ್ತರಾಖಂಡ್ ಜವಾಬ್ದಾರಿ ಪ್ರಹ್ಲಾದ್ ಜೋಶಿ ಹೆಗಲಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 2022ರ ವಿಧಾನಸಭಾ ಚುನಾವಣೆ; ಬಿಜೆಪಿ ಉಸ್ತುವಾರಿಗಳ ನೇಮಕ; ಉತ್ತರಾಖಂಡ್ ಜವಾಬ್ದಾರಿ ಪ್ರಹ್ಲಾದ್ ಜೋಶಿ ಹೆಗಲಿಗೆ

ನವದೆಹಲಿ: 2022ರ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಬಿಜೆಪಿ ಐದು ರಾಜ್ಯಗಳ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿದೆ.

ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಪಂಜಾಬ್ ಹಾಗೂ ಗೋವಾ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಕೇಂದ್ರ ಸಚಿವರುಗಳಿಗೆ ಚುನಾವಣಾ ಉಸ್ತುವಾರಿ ವಹಿಸಿ ನಾಯಕರ ಹೆಸರನ್ನು ಘೋಷಣೆ ಮಾಡಿದೆ.

ಈ ಬಾರಿ ಸಲ್ಮಾನ್​​ ಮನೆಯಲ್ಲಿ ಕಳೆಗುಂದಲಿದೆ ಗಣೇಶ ಚತುರ್ಥಿ ಸಂಭ್ರಮ..!

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಉತ್ತರಾಖಂಡದ ಚುನಾವಣಾ ಉಸ್ತುವಾರಿ ನೀಡಲಾಗಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಉತ್ತರ ಪ್ರದೇಶ ಉಸ್ತುವಾರಿ ವಹಿಸಲಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರಿಗೆ ಮಣಿಪುರದ ಉಸ್ತುವಾರಿ, ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್ ಅವರಿಗೆ ಪಂಜಾಬ್ ಉಸ್ತುವಾರಿ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರಿಗೆ ಗೋವಾ ಉಸ್ತುವಾರಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...