ಬೆಂಗಳೂರು: ರಾಜಧಾನಿ ಬೇಂಗಳೂರಿನಲ್ಲಿಯೂ ದೇವಾಲಯಗಳ ತೆರವಿಗೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದ್ದು, ಬಿನ್ನಿಪೇಟೆಯ ಸಂಕಷ್ಟಹರ ಗಣಪತಿ ದೇವಾಲಯ ಸೇರಿದಂತೆ ಒಟ್ಟು 227 ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಲು ಪಾಲಿಕೆ ಸೂಚನೆ ನೀಡಿದ್ದು, ಜನರ ಆಕ್ರೋಕ್ರೋಕ್ಕೆ ಕಾರಣವಾಗಿದೆ.
ದೇವಾಲಯಗಳ ತೆರವು ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ದೇವಸ್ಥಾನಗಳನ್ನು ತೆರವು ಮಾಡಬೇಕು ಎಂದು ಡಿಸಿಗಳಿಗೆ ಸೂಚಿಸಿದ್ದೇನೆ ಎಂದರು.
ಸಿನಿಮಾದಿಂದ ಪ್ರೇರಣೆ ಪಡೆದು ದುಷ್ಕರ್ಮಿಗಳಿಂದ ರೈಲಿನಲ್ಲಿ ದರೋಡೆ
ಏಕಾಏಕಿಯಾಗಿ ದೇವಾಲಯಗಳನ್ನು ತೆರವು ಮಾಡುವುದು ಸರಿಯಲ್ಲ. ಈ ವಿಚಾರವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಜೊತೆಗೂ ಚರ್ಚಿಸುತ್ತೇನೆ. ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು ನಿಜ. ಆದರೆ ಜನರಿಗೆ ನೋವುಂಟು ಮಾಡುವುದು ಸೂಕ್ತವಲ್ಲ. 2009ರ ಬಳಿಕ ನಿರ್ಮಾಣವಾಗಿರುವ ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ಜನಾಭಿಪ್ರಾಯ ಸಂಗ್ರಹಿಸಿ ಸ್ಥಳಾಂತರ ಮಾಡಬೇಕು ಇಲ್ಲವೇ ಪರ್ಯಾಯ ವ್ಯವಸ್ಥೆ ಮಾಡಿ ತೆರವು ಮಾಡಬೇಕು ಎಂದು ಹೇಳಿದರು.