ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಕೊಂಚ ಕಡಿಮೆಯಾಗಿದ್ದರೂ ನಿರ್ಲಕ್ಷ್ಯ ಮೆರೆಯುವಂತಿಲ್ಲ. ಕಾರಣ ಎರಡು ಡೋಸ್ ಲಸಿಕೆ ಪಡೆದವರಲ್ಲೂ ಕೂಡ ಸೋಂಕು ದೃಢಪಟ್ಟಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಪರಿಸ್ಥಿತಿ ನಿಭಾಯಿಸಲು ಸಿದ್ಧರಾಗಿದ್ದೇವೆ. ಸರ್ಕಾರ ಕಠಿಣ ನಿರ್ದೇಶನಗಳನ್ನು ನೀಡಿದೆ. ಸಧ್ಯಕ್ಕೆ ನೈಟ್ ಕರ್ಫ್ಯೂ ಮುಂದುವರೆಯಲಿದೆ. ದೇವಸ್ಥಾನ, ಸಭೆ, ಸಮಾರಂಭಗಳಿಗೆ ಇರುವ ನಿರ್ಬಂಧ ಮುಂದುವರೆಯಲಿದೆ. ವೀಕೆಂಡ್ ಕರ್ಫ್ಯೂ ಜಾರಿ ಅನುಮಾನವಿದೆ. ಬೆಂಗಳೂರಿನಲ್ಲಿ ಸಧ್ಯ 400ಕ್ಕಿಂತ ಕಡಿಮೆ ಪ್ರಕರಣಗಳಿದ್ದು, ಒಂದು ವೇಳೆ ಸೋಂಕು ಇನ್ನಷ್ಟು ಏರಿಕೆಯಾದರೆ ವೀಕೆಂಡ್ ಕರ್ಫ್ಯೂ ಅನಿವಾರ್ಯವಾಗಲಿದೆ ಎಂದರು.
BIG NEWS: ವಾಜಪೇಯಿ ಕುಡಿಯುತ್ತಿದ್ದರಂತೆ…ತಪ್ಪಾ….?; ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಪ್ರಶ್ನೆ
ಪಾಸಿಟಿವಿಟಿ ರೇಟ್ ಶೇ.2ರಷ್ಟು ಬಂದಲ್ಲಿ ಮಾತ್ರ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗುತ್ತದೆ. ಕೆಲ ವಾಣಿಜ್ಯ ಚಟುವಟಿಕೆಗಳು, ವ್ಯಾಪಾರ ವಹಿವಾಟುಗಳು ವಾರಾಂತ್ಯದ ದಿನಗಳನ್ನು ನಂಬಿದ್ದಾರೆ. ಹಾಗಾಗಿ ವೀಕೆಂಡ್ ಕರ್ಫ್ಯೂ ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಹಬ್ಬಗಳು ಬರುತ್ತಿರುವುದರಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.