alex Certify BIG NEWS: 1 ಲಕ್ಷಕ್ಕೂ ಅಧಿಕ ಮತಗಳಿಂದ ಯೋಗಿ ಆದಿತ್ಯನಾಥ್​ ಜಯಭೇರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 1 ಲಕ್ಷಕ್ಕೂ ಅಧಿಕ ಮತಗಳಿಂದ ಯೋಗಿ ಆದಿತ್ಯನಾಥ್​ ಜಯಭೇರಿ

ಉತ್ತಮ ಆಡಳಿತ ವೈಖರಿ ಮಾತ್ರ ಗೆಲುವಿನ ಹಾದಿ ಎಂದು ಸಾಬೀತುಪಡಿಸಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್​​ ಗೋರಖ್​ಪುರ ಕ್ಷೇತ್ರದಲ್ಲಿ ಬರೋಬ್ಬರಿ 1ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಚುನಾವಣಾ ಪ್ರಚಾರದುದ್ದಕ್ಕೂ ಹಾವು – ಮುಂಗುಸಿಯಂತೆ ಇದ್ದ ಅಖಿಲೇಶ್​ ಯಾದವ್​ ಹಾಗೂ ಯೋಗಿ ಆದಿತ್ಯನಾಥ್​ ಕೊನೆಗೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದಾರೆ. ಯೋಗಿ ಆದಿತ್ಯನಾಥ್​ ಗೋರಖ್​ಪುರದಲ್ಲಿ ಗೆಲುವು ಸಾಧಿಸಿದ್ದರೆ ಅಖಿಲೇಶ್​ ಕರ್ಹಾಲ್​ನಿಂದ ವಿಜೇತರಾಗಿದ್ದಾರೆ.

ಗೋರಖ್​ಪುರ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಪರ್ಧಿಗಳಿಂದ ಯೋಗಿ ಆದಿತ್ಯನಾಥ್​ ಹೆಚ್ಚಿನ ಹೋರಾಟವನ್ನು ಎದುರಿಸಲೇ ಇಲ್ಲ. ಹೀಗಾಗಿ ಅವರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಯೋಗಿ ಆದಿತ್ಯನಾಥ್​ ಲಕ್ನೋದಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಚುನಾವಣಾ ಫಲಿತಾಂಶವನ್ನು ವೀಕ್ಷಿಸುತ್ತಿದ್ದರೆ ಇತ್ತ ಯೋಗಿ ಬೆಂಬಲಿಗರು ಮಠದಲ್ಲಿ ಹಾಗೂ ಪಕ್ಷದ ಕಚೇರಿಯಲ್ಲಿ ಸಂಭ್ರಮಾಚರಣೆಯನ್ನು ಆರಂಭಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...