ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಜಾಲ ಬಗೆದಷ್ಟು ಬಯಲಾಗುತ್ತಿದೆ. ಮನೆಯಲ್ಲಿಯೇ ಸಿಂಥೆಟಿಕ್ ಡ್ರಗ್ಸ್ ಫ್ಯಾಕ್ಟರಿ ತೆರೆದಿದ್ದ ಆರೋಪಿ ಜಾನ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ.
ಎಲೆಕ್ಟ್ರಾನಿಕ್ ಸಿಟಿಯ ಬಾಡಿಗೆ ಮನೆಯನ್ನೇ ಡ್ರಗ್ಸ್ ಫ್ಯಾಕ್ಟರಿ, ಪ್ರಯೋಗಾಲಯ ಮಾಡಿಕೊಂಡಿದ್ದ ನೈಜಿರಿಯನ್ ಪ್ರಜೆ ಜಾನ್ ನನ್ನು ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಮುಂಜಾನೆ ಬಂಧಿಸಿದ್ದು, ಬರೋಬ್ಬರಿ 10 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ವಿವಿಧ ದೇಶಗಳ ಪಾಸ್ ಪೊರ್ಟ್ ಗಳನ್ನು ಆತನಿಂದ ವಶಕ್ಕೆ ಪಡೆದಿದ್ದಾರೆ.
ಕಲಾ – ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಿದವರಿಗೂ ಐಐಟಿಯಲ್ಲಿ ಅವಕಾಶ: ಇಲ್ಲಿದೆ ಪ್ರವೇಶಾತಿ ಕುರಿತ ಸಂಪೂರ್ಣ ಮಾಹಿತಿ
ವಿಚಾರಣೆ ವೇಳೆ ತನ್ನ ಡ್ರಗ್ಸ್ ಜಾಲ ಹಾಗೂ ಮಾದಕ ವಸ್ತು ಸಾಗಾಟದ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದು, ಪೊಲೀಸರೇ ಶಾಕ್ ಆಗಿದ್ದಾರೆ. ಆರೋಪಿ ಜಾನ್ ಹೊಸ ಹೊಸ ಬ್ರ್ಯಾಂಡೆಡ್ ಶೂ ಗಳನ್ನು ಖರೀದಿಸಿ ಅದರಲ್ಲಿ ತಾನು ತಯಾರಿಸುತ್ತಿದ್ದ ಸಿಂಥೆಟಿಕ್ ಡ್ರಗ್ಸ್ ಗಳನ್ನು ಇಟ್ಟು ರವಾನೆ ಮಾಡುತ್ತಿದ್ದ. ಆತನ ಬಳಿ ಇದ್ದ ಹಲವು ಬ್ರ್ಯಾಂಡೆಡ್ ಶೂಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿವಿಧ ಪಾಸ್ ಪೋರ್ಟ್ ಗಳನ್ನು ಜಪ್ತಿ ಮಾಡಿದ್ದಾರೆ. ಒಂದೊಂದು ಪಾಸ್ ಪೋರ್ಟ್ ನಲ್ಲಿ ಒಂದೊಂದು ಬಗೆಯ ಹೆಸರಿರುವುದು ಕೂಡ ತನಿಖೆ ವೇಳೆ ತಿಳಿದು ಬಂದಿದೆ.