alex Certify BIG NEWS: ಹೆಲಿಕಾಪ್ಟರ್​ ದುರಂತದಲ್ಲಿ ಟ್ರೇನಿ ಪೈಲಟ್​ ಹಾಗೂ ಪೈಲಟ್​ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹೆಲಿಕಾಪ್ಟರ್​ ದುರಂತದಲ್ಲಿ ಟ್ರೇನಿ ಪೈಲಟ್​ ಹಾಗೂ ಪೈಲಟ್​ ದುರ್ಮರಣ

ನಲ್ಗೊಂಡ ಜಿಲ್ಲೆಯ ಪೆಡವೂರ ಮಂಡಲದ ತುಂಗತರ್ಥಿ ಗ್ರಾಮದಲ್ಲಿ ಟ್ರೇನಿ ಹೆಲಿಕಾಪ್ಟರ್​ ಪತನಗೊಂಡ ಪರಿಣಾಮ ಮಹಿಳಾ ಟ್ರೇನಿ ಪೈಲಟ್​ ಹಾಗೂ ಮತ್ತೊಬ್ಬ ಪೈಲಟ್​ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸ್ಥಳಕ್ಕಾಗಮಿಸಿದ ನಲ್ಗೊಂಡ ಪೊಲೀಸರು ರಕ್ಷಣಾ ಕಾರ್ಯವನ್ನು ಆರಂಭಿಸಿದ್ದರು. ಆದರೆ ಮಹಿಳಾ ಪೈಲಟ್​ ಪೊಲೀಸರಿಗೆ ಶವವಾಗಿ ಪತ್ತೆಯಾಗಿದ್ದಾರೆ. ದುರಂತಕ್ಕೀಡಾದ ಈ ಹೆಲಿಕಾಪ್ಟರ್​ ನಾಗಾರ್ಜುನ ಸಾಗರ್​​ನಲ್ಲಿರುವ ಫ್ಲೈಟೆಕ್​ ಏವಿಯೇಷನ್​ ಖಾಸಗಿ ವಿಮಾನಯಾನ ಕಂಪನಿಗೆ ಸೇರಿದೆ.

ಪೆಡವೂರ ಮಂಡಲದ ತುಂಗತರ್ಥಿ ಗ್ರಾಮದ ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಹೆಲಿಕಾಪ್ಟರ್​ ಪತನಗೊಂಡು ದಟ್ಟವಾದ ಹೊಗೆ ಆವರಿಸಿರುವ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿದ್ದರು. ಈ ವೇಳೆಯಲ್ಲಿ ಪೊಲೀಸರಿಗೆ ಮಹಿಳಾ ಪೈಲಟ್​ ಶವ ಪತ್ತೆಯಾಗಿದೆ.

ಕೃಷಿ ಭೂಮಿಯಲ್ಲಿನ ಹೈಟೆನ್ಶನ್ ವಿದ್ಯುತ್ ತಂತಿಗಳಿಗೆ ಹೆಲಿಕಾಪ್ಟರ್ ಸಂಪರ್ಕಕ್ಕೆ ಬಂದು ದುರಂತ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...